ಅಡಿಲೇಡ್: ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಗುರುವಾರ ಇಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ ಜಯಿಸಿತು.
ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೇವಿಡ್ ಮಲಾನ್ (134; 128ಎ, 4X12, 6X4) ಚೆಂದದ ಶತಕದ ಬಲದಿಂದ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 287 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ವಾರ್ನರ್ (86; 84ಎ) ಹಾಗೂ ಟ್ರಾವಿಸ್ ಹೆಡ್ (69; 57ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 147 ರನ್ ಸೇರಿಸಿದರು. ಹೆಡ್ ವಿಕೆಟ್ ಗಳಿಸಿದ ಕ್ರಿಸ್ ಜೋರ್ಡಾನ್ ಜೊತೆಯಾಟ ಮುರಿದರು. ಕ್ರೀಸ್‌ಗೆ ಬಂದ ಸ್ಟೀವ್ (80; 78ಎ) ಅಬ್ಬರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ವಾರ್ನರ್ ಅವರೊಂದಿಗೆ 53 ರನ್ ಸೇರಿಸಿದರು. ವಾರ್ನರ್ ಔಟಾದ ನಂತರ ತಂಡವನ್ನು ಗೆಲುವಿನ ದಡ ಸೇರಿಸುವ ಹೊಣೆಯನ್ನು ನಿಭಾಯಿಸಿದರು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1–0 ಮುನ್ನಡೆ ಸಾಧಿಸಿತು.
ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್: 50 ಓವರ್‌ಗಳಲ್ಲಿ 9ಕ್ಕೆ287 (ಡೇವಿಡ್ ಮಲಾನ್ 134, ಜಾಸ್ ಬಟ್ಲರ್ 29, ಡೇವಿಡ್ ವಿಲ್ಲಿ ಔಟಾಗದೆ 34, ಪ್ಯಾಟ್ ಕಮಿನ್ಸ್ 62ಕ್ಕೆ3, ಆ್ಯಡಂ ಜಂಪಾ 55ಕ್ಕೆ3)
ಆಸ್ಟ್ರೇಲಿಯಾ: 46.5 ಓವರ್‌ಗಳಲ್ಲಿ 4ಕ್ಕೆ291 (ಡೇವಿಡ್ ವಾರ್ನರ್ 86, ಟ್ರಾವಿಸ್ ಹೆಡ್ 69, ಸ್ಟೀವನ್ ಸ್ಮಿತ್ ಔಟಾಗದೆ 80, ಅಲೆಕ್ಸ್ ಕ್ಯಾರಿ 21, ಕ್ಯಾಮರಾನ್ ಗ್ರೀನ್ ಔಟಾಗದೆ 20, ಡೇವಿಡ್ ವಿಲಿ 51ಕ್ಕೆ2)
ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.