ADVERTISEMENT

AUS vs IND Test: ವೇಗದ ಅಸ್ತ್ರ ಪ್ರಯೋಗಕ್ಕೆ ಪರ್ತ್ ವೇದಿಕೆ: ಪಿಚ್‌ ಕ್ಯುರೇಟರ್

ಪಿಟಿಐ
Published 13 ನವೆಂಬರ್ 2024, 14:46 IST
Last Updated 13 ನವೆಂಬರ್ 2024, 14:46 IST
<div class="paragraphs"><p>ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಜೋಶ್ ಹ್ಯಾಜಲ್‌ವುಡ್&nbsp;</p></div>

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಜೋಶ್ ಹ್ಯಾಜಲ್‌ವುಡ್ 

   

ಐಸಿಸಿ ಚಿತ್ರ

ಪರ್ತ್: ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ನಡೆಯಲಿರುವ ಇಲ್ಲಿಯ ಕ್ರೀಡಾಂಗಣದ ಪಿಚ್‌ ‘ಉತ್ತಮ ವೇಗ ಮತ್ತು ಬೌನ್ಸ್‌ ಎಸೆತ’ಗಳಿಗೆ ನೆರವಾಗಲಿದೆಯಂತೆ.  

ADVERTISEMENT

ನ. 22ರಿಂದ ಇಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಭಾರತ ತಂಡವು ಟೂರ್ನಿಗೂ ಮುನ್ನ ಯಾವುದೇ ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಅಲ್ಲಧೇ ಇಂಟ್ರಾಸ್ಕ್ವಾಡ್‌ (ತಂಡದೊಳಗಿನ) ಪಂದ್ಯಗಳನ್ನೂ ರದ್ದು ಮಾಡಿದೆ.  ಇದೀಗ ಭಾರತ ತಂಡವು ಡಬ್ಲ್ಯುಎಸಿಎ ಕ್ರೀಡಾಂಗಣದ ಸಮೀಪವಿರುವ ಸೆಂಟರ್‌ ವಿಕೆಟ್‌ನಲ್ಲಿ ಅಭ್ಯಾಸ ಮಾಡುವದರತ್ತ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ತಂಡವೂ ಇಲ್ಲಿ ತಾಲೀಮು ನಡೆಸುತ್ತಿದೆ.

‘ಇದು ಆಸ್ಟ್ರೇಲಿಯಾ, ಇದು ಪರ್ತ್‌.. ನಾನು ಉತ್ತಮ ವೇಗದ ಎಸೆತಗಳಿಗಾಗಿ ವೇದಿಕೆ ಸಿದ್ಧಗೊಳಿಸುತ್ತಿರುವ ಉತ್ತಮ ಬೌನ್ಸ್ ಮತ್ತು ವೇಗದ ಚಲನೆಗೆ ಇಂಬು ನೀಡಲಿದೆ’ ಎಂದು ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್‌ ಮುಖ್ಯ ಕ್ಯುರೇಟರ್‌ ಐಸಾಕ್ ಮೆಕ್‌ಡೊನಾಲ್ಡ್‌ ‘ಇಎಸ್‌ಪಿಎನ್‌ ಕ್ರಿಕ್‌ಇನ್ಫೋ’ಗೆ ತಿಳಿಸಿದ್ದಾರೆ.

ಹೋದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್‌ ಪಂದ್ಯಕ್ಕೆ ನೀಡಲಾಗಿದ್ದ ಮಾದರಿಯ ಪಿಚ್‌ ಅನ್ನೇ ಈಗಲೂ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಎರಡನೇ ಇನಿಂಗ್ಸ್‌ನಲ್ಲಿ 89 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ಬೃಹತ್ ಜಯ ಸಾಧಿಸಿತ್ತು. 

ಪಿಚ್‌ನಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಆಗ ಬ್ಯಾಟರ್‌ ಮಾರ್ನಸ್ ಲಾಬುಷೇನ್ ಕೈಗಳಿಗೆ ಚೆಂಡು ಅಪ್ಪಳಿಸಿತ್ತು. ಆಸ್ಟ್ರೇಲಿಯಾದ ವೇಗಿಗಳಾದ ‌ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಪಂದ್ಯದಲ್ಲಿ ಒಟ್ಟು 12 ವಿಕೆಟ್‌ ಹಂಚಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.