ADVERTISEMENT

AUS vs PAK | ಲಯಕ್ಕೆ ಮರಳಿದ ಮ್ಯಾಕ್ಸ್‌ವೆಲ್‌; ಆಸ್ಟ್ರೇಲಿಯಾ ತಂಡಕ್ಕೆ ಜಯ

ಏಜೆನ್ಸೀಸ್
Published 14 ನವೆಂಬರ್ 2024, 13:44 IST
Last Updated 14 ನವೆಂಬರ್ 2024, 13:44 IST
ಮ್ಯಾಕ್ಸ್‌ವೆಲ್‌
ಎಪಿ/ಪಿಟಿಐ ಚಿತ್ರ
ಮ್ಯಾಕ್ಸ್‌ವೆಲ್‌ ಎಪಿ/ಪಿಟಿಐ ಚಿತ್ರ   

ಬ್ರಿಸ್ಬೇನ್‌: ಅನುಭವಿ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಮಿಂಚಿನ ಬ್ಯಾಟಿಂಗ್ ಮೂಲಕ ಫಾರ್ಮಿಗೆ ಮರಳಿದ ಬಳಿಕ ವೇಗದ ಬೌಲರ್‌ಗಳಾದ ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ನಥಾನ್ ಎಲ್ಲಿಸ್ ತಲಾ ಮೂರು ವಿಕೆಟ್ ಪಡೆದರು. ಇದರಿಂದಾಗಿ ಆಸ್ಟ್ರೇಲಿಯಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮೇಲೆ 29 ರನ್‌ಗಳ ಸುಲಭ ಜಯಪಡೆಯಿತು.

ಮಳೆಯಿಂದಾಗಿ 20 ಓವರುಗಳ ಈ ಪಂದ್ಯ ತಲಾ ಏಳು ಓವರ್‌ಗಳಿಗೆ ಮೊಟಕುಗೊಂಡಿತು. ರನ್‌ಬರ ಎದುರಿಸುತ್ತಿದ್ದ ಮ್ಯಾಕ್ಸ್‌ವೆಲ್‌ ಕೇವಲ 19 ಎಸೆತಗಳಲ್ಲಿ 43 ರನ್ ಸಿಡಿಸಿದರು. ಮಾರ್ಕಸ್‌ ಸ್ಟೊಯಿನಿಸ್‌ 7 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರು. ಆತಿಥೇಯರು 4 ವಿಕೆಟ್‌ಗೆ 93 ರನ್ ಗಳಿಸಿದರು. ನಂತರ ವೇಗದ ದಾಳಿಗೆ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕುಸಿಯಿತು. ಅದು 7 ಓವರುಗಳಲ್ಲಿ 9 ವಿಕೆಟ್‌ಗೆ 64 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಆರು ಆಟಗಾರರಲ್ಲಿ ಯಾರೂ ಎರಡಂಕಿ ಮೊತ್ತ ತಲಪಲಿಲ್ಲ. 

ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1–0 ಮುನ್ನಡೆ ಪಡೆಯಿತು. ಪಾಕಿಸ್ತಾನ ಇತ್ತೀಚೆಗೆ ನಡೆದ ಏಕದಿನ ಸರಣಿಯನ್ನು 2–1 ರಿಂದ ಗೆದ್ದಿತ್ತು.

ADVERTISEMENT

ಸ್ಕೋರುಗಳು: ಆಸ್ಟ್ರೇಲಿಯಾ: 7 ಓವರುಗಳಲ್ಲಿ 4 ವಿಕೆಟ್‌ಗೆ 93 (ಗ್ಲೆನ್ ಮ್ಯಾಕ್ಸ್‌ವೆಲ್‌ 43, ಅಬ್ಬಾಸ್‌ ಅಫ್ರಿದಿ 9ಕ್ಕೆ2); ಪಾಕಿಸ್ತಾನ: 7 ಓವರುಗಳಲ್ಲಿ 9 ವಿಕೆಟ್‌ಗೆ 64 (ಅಬ್ಬಾಸ್‌ ಅಫ್ರಿದಿ ಔಟಾಗದೇ 20; ಕ್ಸೇವಿಯರ್ ಬಾರ್ಟ್ಲೆಟ್‌ 13ಕ್ಕೆ3, ನಥಾನ್ ಎಲ್ಲಿಸ್ 9ಕ್ಕೆ3, ಆ್ಯಡಂ ಜಂಪಾ 11ಕ್ಕೆ2). ಪಂದ್ಯದ ಆಟಗಾರ: ಗ್ಲೆನ್‌ ಮ್ಯಾಕ್ಸ್‌ವೆಲ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.