ಬ್ರಿಸ್ಬೇನ್: ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ಕ್, ಈ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಐದನೇ ಬೌಲರ್ ಎಂಬ ಖ್ಯಾತಿಗೆ ಸ್ಟಾರ್ಕ್ ಭಾಜನರಾಗಿದ್ದಾರೆ.
2011ನೇ ಇಸವಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಸ್ಟಾರ್ಕ್, ತಮ್ಮ 87ನೇ ಟೆಸ್ಟ್ ಪಂದ್ಯದಲ್ಲಿ (165 ಇನಿಂಗ್ಸ್), ಒಟ್ಟು 351 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಆಸ್ಟ್ರೇಲಿಯಾದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಸಾಧಕರು:
ಶೇನ್ ವಾರ್ನ್: 708
ಗ್ಲೆನ್ ಮೆಕ್‌ಗ್ರಾಥ್: 563
ನೇಥನ್ ಲಯನ್: 512
ಡೆನಿಸ್ ಲಿಲ್ಲಿ: 355
ಮಿಚೆಲ್ ಸ್ಟಾರ್ಕ್: 351*
ವಿಂಡೀಸ್‌ಗೆ ಹೊಡ್ಜ್, ಜೋಶುವಾ ಆಸರೆ...
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್, ತಾಜಾ ವರದಿಯ ವೇಳೆಗೆ 75 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ.
ಆಕರ್ಷಕ ಅರ್ಧಶತಕ ಗಳಿಸಿರುವ ಕಾವೇಮ್ ಹೊಡ್ಜ್ (69*) ಹಾಗೂ ಜೋಶುವಾ ಡಿಸಿಲ್ವ (76*) ತಂಡಕ್ಕೆ ಆಸರೆಯಾಗಿದ್ದಾರೆ. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಮೂರು ವಿಕೆಟ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.