ಇಸ್ಲಾಮಾಬಾದ್ (ಎಎಫ್‌ಪಿ): ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಾನುವಾರ ಪಾಕಿಸ್ತಾನಕ್ಕೆ ಬಂದಿಳಿಯಿತು.
24 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ತಂಡದ ಸುರಕ್ಷತೆಗಾಗಿ ಬಿಗಿ ಭದ್ರತೆ ಒದಗಿಸಲಾಗಿದೆ. ನಾಲ್ಕು ಸಾವಿರ ಪೊಲೀಸರು ಮತ್ತು ಸೇನೆಯ ತುಕಡಿಗಳು ಕ್ರಿಕೆಟ್ ತಂಡಗಳು ತಂಗಲಿರುವ ಹೋಟೆಲ್ ಮತ್ತು ಆಡಲಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸಿವೆ. ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳುವ ಮಾರ್ಗದಲ್ಲಿ ಜನಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸೇನಾ ಹೆಲಿಕಾಫ್ಟರ್ ಪಡೆಯ ಗಸ್ತು ಕೂಡ ಏರ್ಪಡಿಸಲಾಗಿತ್ತು.
ಪಾಕ್‌ನಲ್ಲಿ ಆರು ವಾರಗಳವರೆಗೆ ತಂಡವು ಇರಲಿದೆ. ಆಸ್ಟ್ರೇಲಿಯಾ ಆಟಗಾರ ಸ್ಟೀವನ್ ಸ್ಮಿತ್ ಅವರು ತಂಡದ ಆಟಗಾರರೊಂದಿಗೆ ಇರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
1998ರಲ್ಲಿ ಆಸ್ಟ್ರೇಲಿಯಾ ತಂಡವು ಪಾಕ್‌ನಲ್ಲಿ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಆಡಿತ್ತು. 1–0ಯಿಂದ ಗೆದ್ದಿತ್ತು. ಈ ಬಾರಿ ಮೂರು ಟೆಸ್ಟ್, ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಆಸ್ಟ್ರೇಲಿಯಾ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.