ADVERTISEMENT

ಸಾವಿಗೂ ಮುಂಚೆ ಶೇನ್‌ ವಾರ್ನ್‌ಗೆ ಎದೆನೋವು ಕಾಣಿಸಿಕೊಂಡಿತ್ತು: ಪೊಲೀಸರ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2022, 14:29 IST
Last Updated 5 ಮಾರ್ಚ್ 2022, 14:29 IST
ಶೇನ್ ವಾರ್ನ್
ಶೇನ್ ವಾರ್ನ್    

ಕೋ ಸೆಮೈನ್‌: ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಶೇನ್ ವಾರ್ನ್ (52) ಶುಕ್ರವಾರ ರಾತ್ರಿ ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ಹೃದಯಘಾತದಿಂದ ನಿಧನರಾದರು.

ಸಾವಿಗೂ ಮುಂಚೆ ಶೇನ್‌ ವಾರ್ನ್‌ ಅವರು ಎದೆನೋವು ಅನುಭವಿಸಿದ್ದರು. ಅವರಿಗೆ ಅಸ್ತಮಾ ಹಾಗೂ ಹೃದಯದ ಸಮಸ್ಯೆಗಳು ಇದ್ದವು ಎಂದು ಥಾಯ್‌ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಕೋ ಸೆಮೈನ್‌ ದ್ವೀಪದಲ್ಲಿರುವ ಸಮುಜನಾ ಬಂಗಲೆಯಲ್ಲಿ 52 ವರ್ಷ ವಯಸ್ಸಿನ ಶೇನ್‌ ವಾರ್ನ್‌ ನಿಶ್ತೇಜರಾಗಿ ಪತ್ತೆಯಾಗಿದ್ದರು. ಅವರು ನಿಧನ ಹೊಂದಿರುವುದು ನಂತರ ಗೊತ್ತಾಗಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ 15 ವರ್ಷಗಳ ಕಾಲ ವಿಜೃಂಭಿಸಿದವರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 708 ವಿಕೆಟ್‌ಗಳನ್ನು ಗಳಿಸಿದ್ದಾರೆ.

ADVERTISEMENT

ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (800) ಮೊದಲ ಸ್ಥಾನದಲ್ಲಿದ್ದರೆ, ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.