ಪರ್ತ್: ಆ್ಯಂಡಿಲೆ ಪೆಹ್ಲುವಾಯೊ (33ಕ್ಕೆ3) ಮತ್ತು ಡೇಲ್ ಸ್ಟೇಯ್ನ್ (18ಕ್ಕೆ2) ಅವರ ವೇಗದ ದಾಳಿಗೆ ಬೆದರಿದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸೋತಿದೆ. ಈ ಗೆಲುವಿನೊಂದಿಗೆ ಫಾಫ್ ಡು ಪ್ಲೆಸಿ ಸಾರಥ್ಯದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿದೆ.
ಪರ್ತ್ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 38.1 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. 153ರನ್‌ಗಳ ಸುಲಭ ಗುರಿಯನ್ನು ಹರಿಣಗಳ ನಾಡಿನ ತಂಡ 29.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 38.1 ಓವರ್‌ಗಳಲ್ಲಿ 152 (ಕ್ರಿಸ್ ಲಿನ್ 15, ಅಲೆಕ್ಸ್ ಕೇರಿ 33, ಗ್ಲೆನ್ ಮ್ಯಾಕ್ಸ್‌ವೆಲ್ 11, ಮಾರ್ಕಸ್ ಸ್ಟೊಯಿನಿಸ್ 14, ಪ್ಯಾಟ್ ಕಮಿನ್ಸ್ 12, ನೇಥನ್ ಕೌಲ್ಟರ್ ನೈಲ್ 34, ಮಿಚೆಲ್ ಸ್ಟಾರ್ಕ್ 12; ಡೇಲ್ ಸ್ಟೇಯ್ನ್ 18ಕ್ಕೆ2, ಲುಂಗಿ ಗಿಡಿ 26ಕ್ಕೆ2, ಆ್ಯಂಡಿಲೆ ಪೆಹ್ಲುವಾಯೊ 33ಕ್ಕೆ3, ಇಮ್ರಾನ್ ತಾಹಿರ್ 39ಕ್ಕೆ2).
ದಕ್ಷಿಣ ಆಫ್ರಿಕಾ: 29.2 ಓವರ್‌ಗಳಲ್ಲಿ 4 ವಿಕೆಟ್‌ಗೆ 153 (ಕ್ವಿಂಟನ್ ಡಿ ಕಾಕ್ 47, ರೀಜಾ ಹೆನ್ರಿಕ್ಸ್ 44, ಏಡನ್ ಮಾರ್ಕ್‌ರಮ್ 36, ಫಾಫ್ ಡು ಪ್ಲೆಸಿ ಔಟಾಗದೆ 10; ನೇಥನ್ ಕೌಲ್ಟರ್ ನೈಲ್ 26ಕ್ಕೆ1, ಮಾರ್ಕಸ್ ಸ್ಟೊಯಿನಿಸ್ 16ಕ್ಕೆ3).
ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 6 ವಿಕೆಟ್ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.
ಪಂದ್ಯಶ್ರೇಷ್ಠ: ಡೇಲ್ ಸ್ಟೇಯ್ನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.