ನಾರ್ತ್‌ಸೌಂಡ್,ಆ್ಯಂಟಿಗಾ: ಟೀಗ್ ವೈಲಿ ಮತ್ತು ಕೋರಿ ಮಿಲ್ಲರ್ ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು 19 ವರ್ಷದೊಳಗಿವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಶುಕ್ರವಾರ ತಡರಾತ್ರಿ ನಡೆದ ಸೂಪರ್‌ಲೀಗ್ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು 119 ರನ್‌ಗಳಿಂದ ಪಾಕಿಸ್ತಾನ ವಿರುದ್ಧ ಜಯಿಸಿತು.
ಟಾಸ್ ಗೆದ್ದ ಪಾಕ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟೀಜ್ ಮೈಲಿ(71; 97ಎಸೆತ, 4X8) ಮತ್ತು ಮಿಲ್ಲರ್ (64; 75ಎ, 4X5, 6X1) ಅವರ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 276 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಪಾಕ್ ತಂಡವು 35.1 ಓವರ್‌ಗಳಲ್ಲಿ 157 ರನ್ ಗಳಿಸಿ ಆಲೌಟ್ ಆಯಿತು. ಬೌಲರ್ ವಿಲಿಯಂ ಸಾಲ್ಜ್‌ಮನ್ (37ಕ್ಕೆ3) ಬೌಲಿಂಗ್ ಮುಂದೆ ಪಾಕ್ ಬ್ಯಾಟಿಂಗ್ ಕುಸಿಯಿತು.
ಇಂಗ್ಲೆಂಡ್ ಮತ್ತು ಅಫ್ಗಾನಿಸ್ತಾನ ತಂಡಗಳು ಈಗಾಗಲೇ ನಾಲ್ಕರ ಘಟ್ಟ ಪ್ರವೇಶಿಸಿವೆ.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7ಕ್ಕೆ276 (ಕ್ಯಾಂಪ್‌ಬೆಲ್ ಕೆಲಾವೇ 47, ಟೀಗ್ ವೈಲಿ 71, ಕೋರಿ ಮಿಲ್ಲರ್ 64, ಕೂಪರ್ ಕನೊಲಿ 33, ವಿಲಿಯಮ್ ಸಾಲ್ಜ್‌ಮನ್ 25, ಖಾಸೀಂ ಅಕ್ರಂ 40ಕ್ಕೆ3, ಅವೈಸ್ ಅಲಿ 46ಕ್ಕೆ2) ಪಾಕಿಸ್ತಾನ: 35.1 ಓವರ್‌ಗಳಲ್ಲಿ 157 (ಅಬ್ದುಲ್ ಫಸಿಹ 28, ಇರ್ಫಾನ್ ಖಾನ್ 27, ಮೆಹ್ರನ್ ಮುಮ್ತಾಜ್ 29, ಟಾಮ್ ವೈಟ್ನಿ 31ಕ್ಕೆ2, ವಿಲಿಯಂ ಸಾಲ್ಜ್‌ಮನ್ 37ಕ್ಕೆ3, ಜ್ಯಾಕ್ ಸಿನ್‌ಫೀಲ್ಡ್ 34ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 119 ರನ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.