ಮೆಲ್ಬರ್ನ್: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟಿ–20 ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಸಾಧಾರಣ ಮೊತ್ತ ಕಲೆಹಾಕಿದೆ.
ಆಸ್ಟ್ರೇಲಿಯಾ19 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದೆ. ಸದ್ಯ ಮಳೆ ಬಂದ ಪರಿಣಾಮ ಪಂದ್ಯ ಸ್ಥಗಿತಗೊಂಡಿದೆ.
ಭಾರತದ ಪರ ಭುವನೇಶ್ವರ್ ಕುಮಾರ್ 2, ಖಲೀಲ್ ಅಹಮ್ಮದ್ 2, ಜಸ್ಪ್ರೀತ್ ಬೂಮ್ರಾ 1, ಕುಲದೀಪ್ ಯಾದವ್ 1, ಕೃಣಾಲ್ ಪಾಂಡ್ಯ 1 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪರ: ಡಾರ್ಚಿ ಶಾರ್ಟ್ 14, ಆ್ಯರನ್ ಫಿಂಚ್ 00, ಕ್ರಿಸ್ ಲಿನ್ 13, ಗ್ಲೆನ್ ಮ್ಯಾಕ್ಸ್ವೆಲ್ 19, ಮಾರ್ಕಸ್ ಸ್ಟೊಯಿನಿಸ್ 04, ಅಲೆಕ್ಸ್ ಕ್ಯಾರಿ 04, ನೇಥನ್ ಕೌಲ್ಟರ್ ನೈಲ್ 18, ಬೆನ್ ಮೆಕ್ಡರ್ಮಾಟ್ 32*, ಆ್ಯಂಡ್ರ್ಯೂ ಟೈ 12* ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.