ADVERTISEMENT

AUS VS PAK| ವೃತ್ತಿ ಜೀವನದ ಮೊದಲ ತ್ರಿಶತಕ ಸಿಡಿಸಿದ ವಾರ್ನರ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 7:17 IST
Last Updated 30 ನವೆಂಬರ್ 2019, 7:17 IST
   

ಅಡಿಲೇಡ್‌:ಓವಲ್‌ನಲ್ಲಿಆಸ್ಟ್ರೇಲಿಯಾಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಸಿಸ್‌ನ ಆರಂಭಿಕ ಆಟಗಾರಡೇವಿಡ್ವಾರ್ನರ್ಅವರು ತಮ್ಮ ವೃತ್ತಿ ಜೀವನದ ಮೊದಲ ತ್ರಿಶತಕಬಾರಿಸಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದಎರಡನೇ ದಿನವಾದ ಇಂದು (ಶನಿವಾರ) ವಾರ್ನರ್‌ ಅವರುಈ ಸಾಧನೆ ಮಾಡಿದ್ದಾರೆ.

ಭರ್ಜರಿ ಬ್ಯಾಟಿಂಗ್‌ ಮಾಡಿದವಾರ್ನರ್‌ 406 ಎಸೆತಗಳಲ್ಲಿ ಔಟಾಗದೆ 324 ಗಳಿಸಿಬ್ಯಾಟಿಂಗ್‌ ಮಾಡುತ್ತಿದ್ದಾರೆ. ಅವರು ಮಹಮ್ಮದ್‌ಮೂಸಾಓವರ್‌ನಲ್ಲಿ ಜೀವದಾನ ಪಡೆದಿದ್ದರು.

ADVERTISEMENT

ಉತ್ತಮ ಜೊತೆಯಾಟ

ಎರಡನೇ ವಿಕೆಟ್‌ಗೆ ಲಾಬುಚಾನ್ ಹಾಗೂವಾರ್ನರ್‌ ಅವರು ಜೊತೆಯಾಟದಲ್ಲಿ361 ರನ್‌ಪೇರಿಸಿದ್ದು, ಇದು ಓವಲ್‌ನಲ್ಲಿ ದಾಖಲಾದ ಅತೀದೊಡ್ಡ ಜೊತೆಯಾಟ. 162 ರನ್ಗಳಿಸಿದ್ದ ಲಾಬುಚಾನ್‌ಅಫ್ರಿದಿಗೆ ವಿಕೆಟ್‌ ಒಪ್ಪಿಸಿದರು. ಲಾಬುಚಾನ್ ಈ ವರ್ಷ ಟೆಸ್ಟ್‌ನಲ್ಲಿ 829 ರನ್ ಗಳಿಸಿದ್ದು, 2019ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್‌ ಗಳಿಸಿದ ಆಟಗಾರರಾಗಿದ್ದಾರೆ.

ಹಗಲು–ರಾತ್ರಿ ಟೆಸ್ಟ್‌ ಪಂದ್ಯದಲ್ಲಿಆಸ್ವ್ರೇಲಿಯಾವುಇದುವರೆಗೆಸೋತಿಲ್ಲ,ಪಾಕಿಸ್ತಾನದಕ್ರಿಕೆಟ್‌ ತಂಡದ ಕಳಪೆ ಫೀಲ್ಡಿಂಗ್‌ ಅನ್ನುಪಾಕಿಸ್ತಾನದಮಾಜಿ ನಾಯಕವಾಸಿಮ್ಅಕ್ರಮ್‌ ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.