ಪರ್ತ್: ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅವರ ಪರಿಣಾಮಕಾರಿ ದಾಳಿಯ ಮುಂದೆ ವೆಸ್ಟ್ ಇಂಡೀಸ್ ತಂಡವು ಇಲ್ಲಿ ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಹಿನ್ನಡೆ ಅನುಭವಿಸಿತು.
ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 598 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿತ್ತು. ಅದಕ್ಕುತ್ತರವಾಗಿ ವಿಂಡೀಸ್ ತಂಡವು 98. 2 ಓವರ್‌ಗಳಲ್ಲಿ 283 ರನ್ ಗಳಿಸಿ ಆಲೌಟ್ ಆಯಿತು. 315 ರನ್‌ಗಳ ಮುನ್ನಡೆ ಗಳಿಸಿದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ಆರಂಭಿಸಿದ್ದು, 1 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿದೆ.
ವಿಂಡೀಸ್ ಇನಿಂಗ್ಸ್‌ಗೆ ಬ್ರೇಥ್‌ವೇಟ್ (64; 166ಎ, 4X5, 6X1) ಮತ್ತು ತೇಜನಾರಾಯಣ ಚಂದ್ರಪಾಲ್ (51; 79ಎ, 4X7, 6X1) ಉತ್ತಮ ಆರಂಭ ನೀಡಿದರು. ಆದರೆ ವಿಂಡೀಸ್ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸದಂತೆ ಪ್ಯಾಟ್ ಕಮಿನ್ಸ್ (34ಕ್ಕೆ3) ಹಾಗೂ ಸ್ಟಾರ್ಕ್ (51ಕ್ಕೆ3) ತಡೆಯೊಡ್ಡಿದರು. ಸ್ಪಿನ್ನರ್ ನೇಥನ್ ಲಯನ್ (61ಕ್ಕೆ2) ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 4ಕ್ಕೆ598ಡಿಕ್ಲೇರ್ಡ್, ವೆಸ್ಟ್ ಇಂಡೀಸ್: 98.2 ಓವರ್‌ಗಳಲ್ಲಿ 283 (ಕ್ರೇಗ್ ಬ್ರೇಥ್‌ವೇಟ್ 64, ತೇಜನಾರಾಯಣ ಚಂದ್ರಪಾಲ್ 51, ಬ್ಲ್ಯಾಕ್‌ವುಡ್ 36, ಜೇಸನ್ ಹೋಲ್ಡರ್ 27, ಶಾಮರ್ ಬ್ರೂಕ್ಸ್ 33, ಮಿಚೆಲ್ ಸ್ಟಾರ್ಕ್ 51ಕ್ಕೆ3, ಪ್ಯಾಟ್ ಕಮಿನ್ಸ್ 34ಕ್ಕೆ3, ನೇಥನ್ ಲಯನ್ 61ಕ್ಕೆ2) ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 11 ಓವರ್‌ಗಳಲ್ಲಿ 1 ವಿಕೆಟ್‌ಗೆ 29 (ಡೇವಿಡ್ ವಾರ್ನರ್ ಬ್ಯಾಟಿಂಗ್ 17, ಮಾರ್ನಸ್ ಲಾಬುಷೇನ್ ಬ್ಯಾಟಿಂಗ್ 3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.