ADVERTISEMENT

ಮಹಿಳಾ ವಿಶ್ವಕಪ್ | ಪೂನಂ ಸ್ಪಿನ್‌ಗೆ ಮರುಳಾದ ಚಾಂಪಿಯನ್ನರು: ಭಾರತಕ್ಕೆ 17 ರನ್ ಜಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 11:26 IST
Last Updated 21 ಫೆಬ್ರುವರಿ 2020, 11:26 IST
   

ಸಿಡ್ನಿ:ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿನಾಲ್ಕು ಭಾರಿ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾ ಎದುರುಸಾಧಾರಣ ಮೊತ್ತ ಕಲೆಹಾಕಿದ್ದರೂ, ಸ್ಪಿನ್ನರ್‌ ಪೂನಮ್‌ ಯಾದವ್‌ ಅವರ ಅತ್ಯುತ್ತಮ ಬೌಲಿಂಗ್‌ ನಿರ್ವಹಣೆಯಿಂದಾಗಿ ಭಾರತ ತಂಡ 17 ರನ್‌ಗಳ ಗೆಲುವು ಸಾಧಿಸಿತು.

ಇಲ್ಲಿನ ಸಿಡ್ನಿ ಶೋಗ್ರೌಂಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಟಾಸ್‌ ಗೆದ್ದಆಸಿಸ್‌ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದಭಾರತ ದೀಪ್ತಿ ಶರ್ಮಾ (ಅಜೇಯ 49) ಶಫಾಲಿ ವರ್ಮಾ (29),ಜೆಮಿಯಾ ರಾಡ್ರಿಗಸ್‌ (26) ಅವರ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 132 ರನ್‌ ಕಲೆಹಾಕಿತ್ತು.

ಯಾದವ್ಮಿಂಚು
133ರನ್‌ಗಳಸಾಧಾರಣ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿರುವ ಆಸಿಸ್‌ ಪರ ಅಲಿಸ್ಸಾ ಹೀಲಿ ಬಿರುಸಿನ ಆಟವಾಡಿದರು. ಒಂದೆಡೆ ನಿರಂತರವಾಗಿ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ಗೆ ಅಂಟಿಕೊಂಡು ಆಡಿದ ಹೀಲಿ ಕೇವಲ 35 ಎಸೆತಗಲ್ಲಿ 51 ರನ್‌ ಬಾರಿಸಿ ಮಿಂಚಿದರು.

ಹೀಲಿ ಔಟಾದ ಬಳಿಕಆ್ಯಶ್ಲೆ ಗಾರ್ಡನರ್‌ (34) ಹೋರಾಟ ನಡೆಸಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹೀಲಿ ಮತ್ತು ಆ್ಯಶ್ಲೆ ಹೊರತುಪಡಿಸಿ ಉಳಿದವರ್ಯಾರೂ ಎರಡಂಕಿ ದಾಟಲಿಲ್ಲ. ಅಂತಿಮವಾಗಿ ಆಸಿಸ್‌ 19.5 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 115 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್‌ ನೀಡಿದ ನಾಲ್ಕು ವಿಕೆಟ್‌ ಪಡೆದಪೂನಂ ಯಾದವ್‌ ಪಂದ್ಯ ಶ್ರೇಷ್ಠರೆನಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಶಿಖಾ ಪಾಂಡೆ 3.5 ಓವರ್‌ಗಳಲ್ಲಿ 14 ರನ್‌ ನೀಡಿ 3 ವಿಕೆಟ್‌ ಪಡೆದರು. ಕರ್ನಾಟಕದ ರಾಜೇಶ್ವರಿ ಗಾಯಕ್‌ವಾಡ್‌ 1 ವಿಕೆಟ್‌ ಪಡೆದರು.

ಭಾರತ ತನ್ನಮುಂದಿನ ಪಂದ್ಯದಲ್ಲಿ ಫೆಬ್ರುವರಿ 24ರಂದುಬಾಂಗ್ಲಾದೇಶವನ್ನು ಎದುರಿಸಲಿದೆ. ಅದೇ ದಿನ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ.

ತಂಡಗಳು
ಆಸ್ಟ್ರೇಲಿಯಾ:ಅಲಿಸ್ಸಾ ಹೀಲಿ (ವಿಕೆಟ್‌ ಕೀಪರ್‌),ಬೆತ್‌ ಮೂನಿ,ಮೆಗ್‌ ಲ್ಯಾನಿಂಗ್‌ (ನಾಯಕಿ),ಎಲಿಸ್‌ ಪೆರಿ, ಆ್ಯಶ್ಲೆ ಗಾರ್ಡನರ್‌, ರಚೆಲ್‌ ಹೇಯ್ನ್ಸ್‌ (ಉಪ ನಾಯಕಿ),ಅನ್ನಾಬೆಲ್‌ ಸದರ್‌ಲ್ಯಾಂಡ್‌,ಜೆಸ್‌ ಜೊನಾಸ್ಸೆನ್‌,ಡೆಲಿಸ್ಸಾ ಕಿಮಿನ್ಸ್‌,ಮೋಲಿ ಸ್ಟ್ರಾನೊ, ಮೇಗನ್‌ ಶುಟ್‌

ಭಾರತ:ಸ್ಮೃತಿ ಮಂದಾನಾ,ಶಫಾಲಿ ವರ್ಮಾ,ಜೆಮಿಮಾ ರಾಡ್ರಿಗಸ್‌,ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ದೀಪ್ತಿ ಶರ್ಮಾ,ವೇದಾ ಕೃಷ್ಣಮೂರ್ತಿ,ಶಿಖಾ ಪಾಂಡೆ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌),ಅರುಂಧತಿ ರೆಡ್ಡಿ, ಪೂನಂ ಯಾದವ್‌,ರಾಜೇಶ್ವರಿ ಗಾಯಕವಾಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.