ಕೇನ್ಸ್, ಆಸ್ಟ್ರೇಲಿಯಾ: ಸ್ಟೀವನ್ ಸ್ಮಿತ್ ಅವರ ಶತಕದ (105) ನೆರವಿನಿಂದ ಆಸ್ಟ್ರೇಲಿಯಾ ತಂಡ, ನ್ಯೂಜಿಲೆಂಡ್ ಎದುರಿನ ಕೊನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 25 ರನ್‌ಗಳ ಜಯ ಸಾಧಿಸಿತು.
ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ಸ್ವೀಪ್’ ಸಾಧನೆ ಮಾಡಿತು. ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ ಆ್ಯರನ್ ಫಿಂಚ್ ಐದು ರನ್ ಗಳಿಸಿ ಔಟಾದರು. ಆದರೆ ಸ್ಮಿತ್ ಹಾಗೂ ಸಹ ಆಟಗಾರರು ಉತ್ತಮ ಆಟವಾಡಿ ಅವರಿಗೆ ‘ಗೆಲುವಿನ ವಿದಾಯ’ ನೀಡಿದರು.
ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 267 ರನ್ ಗಳಿಸಿದರೆ, ಕೇನ್ ವಿಲಿಯಮ್ಸನ್ ಬಳಗ 49.5 ಓವರ್‌ಗಳಲ್ಲಿ 242 ರನ್‌ಗಳಿಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 5ಕ್ಕೆ 267 (ಸ್ಟೀವನ್ ಸ್ಮಿತ್ 105, ಮಾರ್ನಸ್ ಲಾಬುಶೇನ್ 52, ಅಲೆಕ್ಸ್ ಕೇರಿ ಔಟಾಗದೆ 42, ಟ್ರೆಂಟ್ ಬೌಲ್ಟ್ 25ಕ್ಕೆ 2)
ನ್ಯೂಜಿಲೆಂಡ್ 49.5 ಓವರ್‌ಗಳಲ್ಲಿ 242 (ಗ್ಲೆನ್ ಫಿಲಿಪ್ಸ್ 47, ಜೇಮ್ಸ್ ನೀಶಮ್ 36, ಮಿಚೆಲ್ ಸ್ಟಾರ್ಕ್ 60ಕ್ಕೆ 3, ಕೆಮರಾನ್ ಗ್ರೀನ್ 25ಕ್ಕೆ 2, ಸೀನ್ ಅಬಾಟ್ 31ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 25 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.