ಢಾಕಾ: ಬಾಂಗ್ಲಾದೇಶದ ಅನುಭವಿ ಕ್ರಿಕೆಟಿಗ ಮಶ್ರಫೆ ಮೊರ್ತಜಾ ಅವರಲ್ಲಿ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಅವರು ಕೊರೊನಾ ಸೋಂಕು ತಗುಲಿದ ಎರಡನೇ ಪ್ರಮುಖ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಹೋದ ವಾರ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್ ಆಫ್ರಿದಿ ಅವರಲ್ಲಿ ಸೋಂಕು ಪತ್ತೆಯಾಗಿತ್ತು.
‘ಕಳೆದು ಎರಡು ದಿನಗಳಿಂದ ಮೊರ್ತಜಾ ಅವರು ಜ್ವರದಿಂದ ಬಳಲುತ್ತಿದ್ದರು. ಶುಕ್ರವಾರ ಕೋವಿಡ್ ತಪಾಸಣೆ ಮಾಡಲಾಗಿತ್ತು. ಇಂದು ಅದರ ಫಲಿತಾಂಶ ಬಂದಿದೆ. ಸದ್ಯ ಅವರು ಢಾಕಾದ ನಿವಾಸದಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ’ ಎಂದು ಮಶ್ರಫೆ ಅವರ ಕಿರಿಯ ಸಹೋದರ ಮೊರ್ಸಾಲಿನ್ ಬಿನ್ ಮೊರ್ತಜಾ ಬಾಂಗ್ಲಾದೇಶದ ಯುನೈಟೆಡ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಮೊರ್ತಜಾ ಅವರ ಕುಟುಂಬದ ಸದಸ್ಯರಲ್ಲಿಯೂ ಸೋಂಕು ಪತ್ತೆಯಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದ ಸಂಸತ್ ಸದಸ್ಯರೂ ಆಗಿರುವ ಮೊರ್ತಜಾ, ತಮ್ಮ ತವರು ಹಾಗೂ ಮತಕ್ಷೇತ್ರ ನರೇಲ್‌ನಲ್ಲಿ ಮಾನವೀಯ ಕಾರ್ಯಗಳಲ್ಲಿ ನಿರತರಾಗಿದ್ದರು. ಕೋವಿಡ್‌ನಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.