ಮೆಲ್ಬರ್ನ್/ಢಾಕಾ: ‘ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿರುವ ಡೇವಿಡ್ ವಾರ್ನರ್ ಅವರನ್ನು ಸದ್ಯದಲ್ಲೇ ನಡೆಯುವ ತಂಡದ ಆಯ್ಕೆ ಸಂದರ್ಭ ದಲ್ಲಿ ಪರಿಗಣಿಸಲಾಗುವುದು’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆವಿನ್ ರಾಬರ್ಟ್ಸ್ ಸ್ಪಷ್ಟಪಡಿಸಿದರು.
ಆಸ್ಟ್ರೇಲಿಯಾ ತಂಡದ ನಾಯಕ ರಾಗಿದ್ದ ಸ್ಟೀವ್ ಸ್ಮಿತ್, ಉಪನಾಯಕ ರಾಗಿದ್ದ ಡೇವಿಡ್ ವಾರ್ನರ್ ಮತ್ತು ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾಂ ಕ್ರಾಫ್ಟ್ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸ್ಮಿತ್ ಮತ್ತು ಬ್ಯಾಂಕ್ರಾಫ್ಟ್ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, ಎಲ್ಲದಕ್ಕೂ ವಾರ್ನರ್ ಕಾರಣ ಎಂದು ಹೇಳಿದ್ದರು.
ಇದರ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೆವಿನ್ ‘ಈ ಹೇಳಿಕೆಯು ವಾರ್ನರ್ ಅವರ ಭವಿಷ್ಯದ ಮೇಲೆ ಪರಿಣಾಮ ಬೀರಲಾರದು’ ಎಂದಿದ್ದಾರೆ.
ಸ್ಮಿತ್ ಮೇಲಿನ ನಿಷೇಧ ವಾಪಸ್: ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಕ್ಕೆ ಸ್ಮಿತ್ ಮೇಲೆ ಹೇರಿದ್ದ ನಿಷೇಧವನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ತೆರವುಗೊಳಿಸಿದೆ. ಹೀಗಾಗಿ ಸ್ಮಿತ್, ಕಾಮಿಲಾ ವಿಕ್ಟೋರಿಯನ್ಸ್ ಪರವಾಗಿ ಆಡುವುದು ಖಚಿತವಾಗಿದೆ. ಲೀಗ್ ಜನವರಿ ಐದರಂದು ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.