ADVERTISEMENT

BAN vs SA ಮೊದಲ ಟೆಸ್ಟ್: ಸೋಲು ತಪ್ಪಿಸಲು ಬಾಂಗ್ಲಾ ಹೋರಾಟ

ದಕ್ಷಿಣ ಆಫ್ರಿಕಾದ ಕೈಲ್ ವೆರೈನ್ ಶತಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 13:01 IST
Last Updated 22 ಅಕ್ಟೋಬರ್ 2024, 13:01 IST
<div class="paragraphs"><p>ಕೈಲ್‌ ವೆರೈನ್‌</p></div>

ಕೈಲ್‌ ವೆರೈನ್‌

   

ಮೀರಪುರ್‌, (ಬಾಂಗ್ಲಾದೇಶ): ಬಾಂಗ್ಲಾದೇಶ ತಂಡವು, ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ತಪ್ಪಿಸುವ ಸವಾಲು ಎದುರಿಸುತ್ತಿದೆ. ಎರಡನೇ ದಿನವಾದ ಮಂಗಳವಾರ ಆಟ ಮುಗಿದಾಗ ಆತಿಥೇಯರು 3 ವಿಕೆಟ್‌ಗೆ 101 ರನ್ ಗಳಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 101 ರನ್ ಗಳಿಸಬೇಕಾಗಿದೆ.

ಆರಂಭ ಆಟಗಾರ ಮಹಮುದುಲ್ ಹಸನ್ ಜಾಯ್ (38) ಮತ್ತು ಮುಷ್ಫಿಕುರ್‌ ರಹೀಂ (31) ಅವರು ಅಜೇಯರಾಗಿ ಉಳಿದಿದ್ದು, ಮುರಿಯದ ನಾಲ್ಕನೇ ವಿಕೆಟ್‌ಗೆ 42 ರನ್ ಸೇರಿಸಿದ್ದಾರೆ. ಮುಷ್ಫಿಕುರ್ ಈ ಹಾದಿಯಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿದ ಬಾಂಗ್ಲಾದೇಶದ ಮೊದಲ ಕ್ರಿಕೆಟರ್ ಎನಿಸಿದರು.

ADVERTISEMENT

ಇದಕ್ಕೆ ಮೊದಲು ಬಾಂಗ್ಲಾದೇಶದ 106 ರನ್‌ಗಳಿಗೆ ಉತ್ತರವಾಗಿ, ದಕ್ಷಿಣ ಆಫ್ರಿಕಾ ತಂಡವು (ಸೋಮವಾರ: 6 ವಿಕೆಟ್‌ಗೆ 140) ಮೊದಲ ಇನಿಂಗ್ಸ್‌ನಲ್ಲಿ 308 ರನ್ ಗಳಿಸಿ 202 ರನ್‌ಗಳ ಮುನ್ನಡೆ ಪಡೆದಿತ್ತು. ವಿಕೆಟ್ ಕೀಪರ್ ಕೈಲ್‌ ವೆರೈನ್ ಆಕರ್ಷಕ ಶತಕ (114 ರನ್, 144 ಎ, 4x8, 6x2) ಗಳಿಸಿದರು. ಏಳನೇ ವಿಕೆಟ್‌ಗೆ ವಿಯಾನ್ ಮುಲ್ಡರ್ (54, 112ಎ) ಜೊತೆಗೆ 119 ರನ್ ಸೇರಿಸಿದ್ದರಿಂದ ದಕ್ಷಿಣ ಆಫ್ರಿಕಾದ ಮುನ್ನಡೆ ಉಬ್ಬುತ್ತ ಹೋಯಿತು.

ನಂತರ ಕಗಿಸೊ ರಬಾಡ ಮೂರನೇ ಓವರ್‌ನಲ್ಲಿ ಶಾದ್ಮನ್ ಇಸ್ಲಾಂ ಮತ್ತು ಮೊಮಿನುಲ್‌ ಹಕ್‌ ಅವರ  ವಿಕೆಟ್‌ಗಳನ್ನು ಪಡೆದು ಪೆಟ್ಟು ನೀಡಿದ್ದರು. ಮೊತ್ತ 59 ರನ್‌ಗಳಾಗಿದ್ದಾಗ ನಾಯಕ ನಜ್ಮುಲ್ ಹಸನ್ ಶಾಂತೊ (23) ನಿರ್ಗಮಿಸಿದರು.

ಸ್ಕೋರುಗಳು: ಬಾಂಗ್ಲಾದೇಶ: 106 ಮತ್ತು 27.1 ಓವರುಗಳಲ್ಲಿ 3 ವಿಕೆಟ್‌ಗೆ 101 (ಮಹಮದುಲ್ ಹಸನ್ ಜಾಯ್‌ ಔಟಾಗದೇ 38, ಮುಷ್ಫಿಕುರ್‌ ರಹೀಂ ಔಟಾಗದೇ 31; ರಬಾಡ 10ಕ್ಕೆ2); ದಕ್ಷಿಣ ಆಫ್ರಿಕಾ: 88.4 ಓವರುಗಳಲ್ಲಿ 308 (ಕೈಲ್‌ ವೆರೈನ್ 114, ವಿಯಾನ್ ಮುಲ್ಡರ್ 54, ಡೇನ್ ಪೀಟ್ 32; ಹಸನ್ ಮಹಮುದ್‌ 66ಕ್ಕೆ3, ಮೆಹಿದಿ ಹಸನ್ ಮಿರಾಜ್ 63ಕ್ಕೆ2, ತೈಜುಲ್ ಇಸ್ಲಾಂ 122ಕ್ಕೆ5).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.