ದುಬೈ: ಟಿ20 ವಿಶ್ವಕಪ್ ಪಂದ್ಯದಲ್ಲಿ ನೇಪಾಳ ತಂಡದ ನಾಯಕ ರೋಹಿತ್ ಪೌದೆಲ್ ಜೊತೆ ವಾಗ್ವಾದದ ವೇಳೆ ಅನುಚಿತವಾಗಿ ಅವರ ಮೈಗೆ ತಾಗಿದ ಬಾಂಗ್ಲಾದೇಶ ತಂಡದ ವೇಗಿ ತಂಜಿಮ್ ಹಸನ್ ಶಕೀಬ್ ಅವರಿಗೆ ಪಂದ್ಯ ಶುಲ್ಕದ ಶೇ 15ರಷ್ಟು ಮೊತ್ತವನ್ನು ದಂಡವನ್ನಾಗಿ ವಿಧಿಸಲಾಗಿದೆ.
ಭಾನುವಾರ ಕಿಂಗ್ಸ್‌ಟೌನ್‌ನಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ನೇಪಾಳ ತಂಡ ಗುರಿ ಬೆನ್ನೆಟ್ಟುವಾಗ ಮೂರನೇ ಓವರ್‌ನಲ್ಲಿ ಈ ಪ್ರಕರಣ ನಡೆದಿದೆ. ಬಾಂಗ್ಲಾದೇಶ ಪಂದ್ಯವನ್ನು 21 ರನ್‌ಗಳಿಂದ ಗೆದ್ದುಕೊಂಡಿತ್ತು.
ಚೆಂಡನ್ನೆಸೆದ ಬಳಿಕ ತಂಜಿಮ್, ಎದುರಾಳಿ ನಾಯಕ ಪೌದೆಲ್ ಕಡೆ ಆಕ್ರಮಣಕಾರಿಯಾಗಿ ನಡೆದುಹೋಗಿ ಅವರ ಮೈಗೆ ಉದ್ದೇಶಪೂರ್ವಕವಾಗಿ ತಾಗಿದರು. ಅವರು ಐಸಿಸಿಯ ವಿಧಿ 2.12 ಉಲ್ಲಂಘಿಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ.
ಆ ಪಂದ್ಯದಲ್ಲಿ ತಂಜಿಮ್ 7 ರನ್ನಿಗೆ 4 ವಿಕೆಟ್ ಪಡೆದಿದ್ದರು. ಆಟಗಾರರನ್ನು, ನೆರವು ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫ್ರಿ, ಅಥವಾ ಇನ್ನಾರನ್ನೇ (ಅಂತರರಾಷ್ಟ್ರೀಯ ಪಂದ್ಯದ ವೇಳೆ ಪ್ರೇಕ್ಷಕರೂ ಸೇರಿದಂತೆ) ಅನುಚಿತವಾಗಿ ಮೈಯಿಂದ ತಳ್ಳಲೆತ್ನಿಸುವುದಕ್ಕೆ ಈ ವಿಧಿ ಸಂಬಂಧಿಸಿದೆ.
ಅಂಪೈರ್‌ಗಳಾದ ಅಹಸಾನ್ ರಝಾ, ಸ್ಯಾಮ್ ನಾಗಾಯ್ಸಕಿ, ಮೂರನೇ ಅಂಪೈರ್ ಜೆ.ಮದನಗೋಪಾಲ್ ಮತ್ತು ನಾಲ್ಕನೇ ಅಂಪೈರ್ ಕುಮಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.