ADVERTISEMENT

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಬಾಂಗ್ಲಾದೇಶ ಕ್ರಿಕೆಟಿಗ ಮಹಮದುಲ್ಲಾ ವಿದಾಯ

ಪಿಟಿಐ
Published 8 ಅಕ್ಟೋಬರ್ 2024, 13:46 IST
Last Updated 8 ಅಕ್ಟೋಬರ್ 2024, 13:46 IST
ಮಹಮದುಲ್ಲಾ
ಮಹಮದುಲ್ಲಾ   

ನವದೆಹಲಿ: ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್‌ ಮಹಮದುಲ್ಲಾ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಮಂಗಳವಾರ ವಿದಾಯ ಹೇಳಿದ್ದಾರೆ. ಈಗ ಭಾರತ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಅವರ ಪಾಲಿಗೆ ಕೊನೆಯ ಪಂದ್ಯವಾಗಲಿದೆ.

ಹಾಲಿ ಟಿ20 ಸರಣಿಯ ಎರಡನೇ ಪಂದ್ಯ ಬುಧವಾರ ನವದೆಹಲಿಯಲ್ಲಿ ಹಾಗೂ ಅಂತಿಮ ಪಂದ್ಯ ಶನಿವಾರ ಹೈದರಾಬಾದಿನಲ್ಲಿ ನಡೆಯಲಿದೆ.

‘ಈ ಸರಣಿಯ ಅಂತಿಮ ಪಂದ್ಯದ ನಂತರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತನಾಗುತ್ತಿದ್ದೇನೆ’ ಎಂದು ಅವರು ಭಾರತ ವಿರುದ್ಧ ಎರಡನೇ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ADVERTISEMENT

‘ಇದು ವಿದಾಯಕ್ಕೆ ಸಕಾಲವಾಗಿದ್ದು, ಏಕದಿನ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುತ್ತೇನೆ’ ಎಂದರು.

38 ವರ್ಷದ ಈ ಆಟಗಾರ 2007ರಲ್ಲಿ ಬಾಂಗ್ಲಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 50 ಟೆಸ್ಟ್‌, 232 ಏಕದಿನ ಹಗೂ 139 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು ಎಂಟು ಅರ್ಧ ಶತಕ ಸೇರಿದಂತೆ 2395 ರನ್‌ ಗಳಿಸಿದ್ದಾರೆ. ಆಫ್ ಸ್ಪಿನ್ ದಾಳಿಯಲ್ಲಿ 40 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟಿ20 ತಂಡಕ್ಕೆ ನಾಯಕರಾಗಿದ್ದ ಅವರು 2021ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.