ADVERTISEMENT

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಮಾಡು–ಮಡಿ ಪಂದ್ಯ

ನೇಪಾಳ ವಿರುದ್ಧ ಮುಖಾಮುಖಿ ಇಂದು; ಪಂದ್ಯ ಆರಂಭ: ಬೆಳಿಗ್ಗೆ 5.00ಕ್ಕೆ

ಪಿಟಿಐ
Published 16 ಜೂನ್ 2024, 22:30 IST
Last Updated 16 ಜೂನ್ 2024, 22:30 IST
<div class="paragraphs"><p>ಬಾಂಗ್ಲಾದೇಶದ ವೇಗಿ ತಂಜಿಮ್ ಹಸನ್ ಸಕಿಬ್‌ </p></div>

ಬಾಂಗ್ಲಾದೇಶದ ವೇಗಿ ತಂಜಿಮ್ ಹಸನ್ ಸಕಿಬ್‌

   

ಕಿಂಗ್ಸ್‌ಟೌನ್ (ಸೇಂಟ್‌ ವಿನ್ಸೆಂಟ್): ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ‘ಡಿ’ ಗುಂಪಿನ ಪಂದ್ಯದಲ್ಲಿ ಸೋಮವಾರ ನೇಪಾಳ ತಂಡವನ್ನು ಎದುರಿಸಲಿದ್ದು, ಸೂಪರ್‌ ಎಂಟರಲ್ಲಿ ಸ್ಥಾನ ಪಡೆಯುವತ್ತ ಲಕ್ಷ್ಯ ಇರಿಸಿಕೊಂಡಿದೆ.

ಬಾಂಗ್ಲಾದೇಶ ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಗಳಿಸಿದ್ದು, ಗೆದ್ದರೆ ಮಾತ್ರ ಅದರ ಹಾದಿ ಸುಲಭ. ಆದರೆ ಸ್ಪೂರ್ತಿಯುತ ಪ್ರದರ್ಶನ ನೀಡಿರುವ ನೇಪಾಳ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹಿಮಾಲಯ ಮಡಿಲಿನ ಈ ಪುಟ್ಟ ರಾಷ್ಟ್ರ ಈಗಾಗಲೇ ಸೂಪರ್‌ ಎಂಟರ ಅವಕಾಶ ಕಳೆದುಕೊಂಡರೂ ಎದುರಾಳಿ ತಂಡಕ್ಕೆ ಮಗ್ಗುಲ ಮುಳ್ಳಾಗಬಹುದು. ಒಂದು ದಿನ ಹಿಂದೆಯಷ್ಟೇ ಪ್ರಬಲ ದಕ್ಷಿಣ ಆಫ್ರಿಕಾ, ಈ ತಂಡದ ವಿರುದ್ಧ ಗೆಲ್ಲಲು ಹರಸಾಹಸ ಪಡಬೇಕಾಯಿತು.

ADVERTISEMENT

ದಕ್ಷಿಣ ಆಫ್ರಿಕಾ ಈಗಾಗಲೇ ಗುಂಪಿನಿಂದ ಸೂಪರ್ ಎಂಟರ ಹಂತ ತಲುಪಿದೆ.

ಒಂದೊಮ್ಮೆ ಬಾಂಗ್ಲಾದೇಶ ದೊಡ್ಡ ಅಂತರದಿಂದ ನೇಪಾಳಕ್ಕೆ ಸೋತಲ್ಲಿ, ನೆದರ್ಲೆಂಡ್ಸ್‌, ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾ ವಿರುದ್ಧ ಸುಲಭ ಗೆಲುವು ಪಡೆದಲ್ಲಿ ಆಗ ಲೆಕ್ಕಾಚಾರಗಳು ಬದಲಾಗಬಹುದು. ಆ ಸಾಧ್ಯತೆ ಕಡಿಮೆಯಾದರೂ ಈ ಟೂರ್ನಿಯಲ್ಲಿ ಕೆಲವು ಅನಿರೀಕ್ಷಿತಗಳು ಘಟಿಸಿರುವುದನ್ನು ಮರೆಯುವಂತಿಲ್ಲ.

ಪಂದ್ಯ ಆರಂಭ: ಬೆಳಿಗ್ಗೆ 5.00

ನೇಪಾಳದ ಆಸಿಫ್‌ ಶೇಖ್‌ ಎಪಿ/ ಪಿಟಿಐ ಚಿತ್ರ

ಲಂಕಾಕ್ಕೆ ಗೆಲುವಿನೊಡನೆ ಲೀಗ್ ಮುಗಿಸುವ ಗುರಿ

‘ಡಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಶ್ರೀಲಂಕಾ ತಂಡ ಸೋಮವಾರ ನಡೆಯುವ ಇನ್ನೊಂದು ಪಂದ್ಯದಲ್ಲಿ ಬಿರುಸಿನ ಆಟವಾಡಬಲ್ಲ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. 2014ರ ಚಾಂಪಿಯನ್ ಶ್ರೀಲಂಕಾ ತಂಡ ಈಗಾಗಲೇ ಸೂಪರ್ ಎಂಟರ ಅವಕಾಶ ಕಳೆದುಕೊಂಡರೂ ಗೆಲುವಿನೊಡನೆ ಲೀಗ್ ಮುಗಿಸಿ ನಿಟ್ಟುಸಿರುಬಿಡುವ ಗುರಿಹೊಂದಿದೆ. ಲಂಕಾ ತಂಡದ ಪ್ರದರ್ಶನ ಈ ಸಲ ಸಪ್ಪೆಯಾಗಿದೆ. ಸ್ಕಾಟ್‌ ಎಡ್ವರ್ಡ್ಸ್‌ ನೇತೃತ್ವದ ಡಚ್ಚರ ಪಡೆ ಸ್ಫೂರ್ತಿಯುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ. ಪಂದ್ಯ ಆರಂಭ: ಬೆಳಿಗ್ಗೆ 6.00 ದಿನದ ಇನ್ನೊಂದು ಪಂದ್ಯ ಪಾಪುವಾ ನ್ಯೂಗಿನಿ– ನ್ಯೂಜಿಲೆಂಡ್ ಪಂದ್ಯ ಆರಂಭ: ರಾತ್ರಿ 8.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.