ಬೆಂಗಳೂರು: ಎಡಗೈ ವೇಗದ ಬೌಲರ್ ಲುಕ್ಮಾನ್ ಮೇರಿವಾಲಾ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಬರೋಡಾ ತಂಡ, ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಇನಿಂಗ್ಸ್ ಹಾಗೂ 96 ರನ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎರಡನೇ ದಿನವೇ ಬರೋಡಾ ಗೆಲುವಿನತ್ತ ಹೆಜ್ಜೆಯಿಟ್ಟಿತು. 271 ರನ್ ಹಿನ್ನಡೆಯೊಡನೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಮಹಾರಾಷ್ಟ್ರ ಎರಡನೇ ದಿನದಾಟ ಮುಗಿದಾಗ 5 ವಿಕೆಟ್‌ಗೆ 121 ರನ್ ಗಳಿಸಿತ್ತು. ಮೂರನೇ ದಿನವಾದ ಗುರುವಾರ ಮಹಾರಾಷ್ಟ್ರ ತಂಡದ ಇನಿಂಗ್ಸ್ 175 ರನ್‌ಗಳಿಗೆ ಕೊನೆಗೊಂಡಿತು. ಲುಕ್ಮಾನ್ 53 ರನ್ನಿಗೆ 5 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್:
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ: 127;
ಬರೋಡಾ ಕ್ರಿಕೆಟ್ ಸಂಸ್ಥೆ: 74.2 ಓವರುಗಳಲ್ಲಿ 398;
ಎರಡನೇ ಇನಿಂಗ್ಸ್:
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ: 50.2 ಓವರುಗಳಲ್ಲಿ 175 (ಅಂಕಿತ್ ಭಾವ್ನೆ 47, ಲುಕ್ಮಾನ್ ಮೇರಿವಾಲಾ 53ಕ್ಕೆ5, ಬಾಬಾಸಫಿ ಪಠಾಣ್ 59ಕ್ಕೆ2, ರಾಜ್ ಲಿಂಬಾನಿ 18ಕ್ಕೆ2);
ಬರೋಡಾ ಕ್ರಿಕೆಟ್ ಸಂಸ್ಥೆಗೆ ಇನಿಂಗ್ಸ್ ಹಾಗೂ 96 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.