ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಈ ಬಾರಿಯ ಸಮಾರೋಪ ಸಮಾರಂಭ ಆಯೋಜಿಸಲು ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಷ್ಠಿತ ಸಂಸ್ಥೆಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಹ್ವಾನ ನೀಡಿದೆ.
ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ‘ಪ್ರಸ್ತಾವನಾ ಮನವಿ’ಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
‘ಟೆಂಡರ್ ಪ್ರಕ್ರಿಯೆಯ ಷರತ್ತುಗಳ ವಿಸ್ತೃತ ವಿವರಣೆ, ಅರ್ಹತಾ ಮಾನದಂಡಗಳು, ಬಿಡ್ ಸಲ್ಲಿಕೆ ಪ್ರಕ್ರಿಯೆಯ ವಿವರ, ಹಕ್ಕುಗಳು–ಕಟ್ಟುಪಾಡುಗಳು ಮತ್ತು ಇತರ ವಿವರಗಳನ್ನು ‘ಪ್ರಸ್ತಾವನಾ ಮನವಿ’ಯಲ್ಲಿ ಉಲ್ಲೇಖಿಸಲಾಗಿದೆ. ಮರುಪಾವತಿಯಾಗದ ₹1,00,000 ಶುಲ್ಕ ಪಾವತಿಸಿ (ಸರಕು ಮತ್ತು ಸೇವಾ ತೆರಿಗೆ ಸಹಿತ) ‘ಪ್ರಸ್ತಾವನಾ ಮನವಿ’ಯನ್ನು ಪಡೆಯಬಹುದು’ ಎಂದು ಬಿಸಿಸಿಐ ತಿಳಿಸಿದೆ.
‘ಪ್ರಸ್ತಾವನಾ ಮನವಿ’ಯನ್ನು ಏಪ್ರಿಲ್ 25ರವರಗೆ ಪಡೆಯಲು ಅವಕಾಶವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಡ್ಡಿಂಗ್ ಪ್ರಕ್ರಿಯೆಯನ್ನು ಯಾವುದೇ ಹಂತದಲ್ಲಿಯೂ ಕಾರಣ ನೀಡದೆಯೇ ರದ್ದುಗೊಳಿಸುವ ಹಕ್ಕು ಸಹ ಬಿಸಿಸಿಐಗೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.