ಹೈದರಾಬಾದ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೀವಮಾನದ ಸಾಧನೆ ಪ್ರಶಸ್ತಿಗೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಭಾಜನರಾಗಿದ್ದಾರೆ.
ಉದಯೋನ್ಮುಖ ಕ್ರಿಕೆಟಿಗ ಶುಭಮನ್ ಗಿಲ್ ಅವರು 2022-23ನೇ ಸಾಲಿನ 'ವರ್ಷದ ಕ್ರಿಕೆಟಿಗ' ಪ್ರಶಸ್ತಿ ಪಡೆದಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಬಿಸಿಸಿಐ ಪ್ರಶಸ್ತಿ ಪಟ್ಟಿ ಇಂತಿದೆ:
ಅಂತರರಾಷ್ಟ್ರೀಯ ಕ್ರಿಕೆಟ್ಗೆ ಅತ್ಯುತ್ತಮ ಪದಾರ್ಪಣೆ:
2019-20: ಮಯಂಕ್ ಅಗರವಾಲ್
2020-21: ಅಕ್ಷರ್ ಪಟೇಲ್
2021-22: ಶ್ರೇಯಸ್ ಅಯ್ಯರ್
2022-23: ಯಶಸ್ವಿ ಜೈಸ್ವಾಲ್
ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ (ಪಾಲಿ ಉಮ್ರಿಗಾರ್ ಪ್ರಶಸ್ತಿ)
2019- 20: ಮೊಹಮ್ಮದ್ ಶಮಿ
2020-21: ಆರ್. ಅಶ್ವಿನ್
2021-22: ಜಸ್ಪ್ರೀತ್ ಬೂಮ್ರಾ
2022-23: ಶುಭಮನ್ ಗಿಲ್
ದಿಲೀಪ್ ಸರ್ದೇಸಾಯಿ ಪ್ರಶಸ್ತಿ:
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ - 2022-23 (ಭಾರತ vs ವೆಸ್ಟ್ಇಂಡೀಸ್): ಆರ್. ಅಶ್ವಿನ್
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ - 2022-23 (ಭಾರತ vs ವೆಸ್ಟ್ಇಂಡೀಸ್): ಯಶಸ್ವಿ ಜೈಸ್ವಾಲ್.
ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ:
ಫಾರೂಕ್ ಇಂಜಿನಿಯರ್ ಮತ್ತು ರವಿಶಾಸ್ತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.