ADVERTISEMENT

ದೇಶಕ್ಕೆ ಮರಳಿದ ವಿಂಗ್ ಕಮಾಂಡರ್‌ ಅಭಿನಂದನ್‌ಗೆ ಬಿಸಿಸಿಐ, ಕ್ರಿಕೆಟಿಗರಿಂದ ಗೌರವ 

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 5:51 IST
Last Updated 2 ಮಾರ್ಚ್ 2019, 5:51 IST
   

ಮುಂಬೈ: ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ಅವರು ದೇಶಕ್ಕೆ ಮರಳಿದ ಹಿನ್ನೆಲೆಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಸೇರಿದಂತೆ ಹಲವು ಕ್ರಿಕೆಟಿಗರು ಟ್ವಿಟರ್‌ನಲ್ಲಿ ಗೌರವ ಸಲ್ಲಿಸಿದ್ದಾರೆ.

ಶುಕ್ರವಾರ ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ಸಾದ ಅಭಿನಂದನ್‌ಗೆ ಟ್ವಿಟರ್‌ನಲ್ಲಿ ಸ್ವಾಗತ ಕೋರಿರುವ ಬಿಸಿಸಿಐ, ‘ಅಭಿನಂದನ್‌ಗೆ ಸ್ವಾಗತ, ನೀವು ಆಕಾಶವನ್ನು ಆಳುವುದರ ಜತೆಗೆ ನಮ್ಮ ಹೃದಯವನ್ನು ಗೆದ್ದಿದ್ದೀರಿ. ನಿಮ್ಮ ಧೈರ್ಯ ಹಾಗೂ ಘನತೆ ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ’ ಎಂದು ಬರೆಯಲಾಗಿದೆ. ಜತೆಗೆ, ಭಾರತದ ಕ್ರಿಕೆಟ್‌ ತಂಡದ ಜರ್ಸಿನಂ 1 ಕ್ಕೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಹೆಸರು ಪ್ರಕಟಿಸಿದ ಚಿತ್ರವನ್ನು ಹಂಚಿಕೊಂಡಿದೆ.

ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಟ್ವೀಟ್‌ ಮಾಡುವ ಮೂಲಕ ಅಭಿನಂದನ್‌ಗೆ ಗೌರವ ಸೂಚಿಸಿದ್ದಾರೆ.

ADVERTISEMENT

ಇತ್ತೀಚೆಗೆ ಭಾರತದ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಷ್‌ನದ್ದೆಂದು ಹೇಳಲಾದ ಶಿಬಿರದ ಮೇಲೆ ಫೆ. 26ರಂದು ದಾಳಿ ನಡೆಸಿತ್ತು. ಮರುದಿನ ಎಫ್‌ 16 ವಿಮಾನಗಳೂ ಇದ್ದ 24 ಯುದ್ಧ ವಿಮಾನಗಳೊಂದಿಗೆ ಭಾರತದ ಮೇಲೆ ದಾಳಿಗೆ ಬಂದಿತ್ತು. ಈ ದಾಳಿಯನ್ನು ಭಾರತದ ವಾಯುಪಡೆಯ ಎಂಟು ಮಿಗ್‌ 21 ವಿಮಾನಗಳು ಹಿಮ್ಮೆಟ್ಟಿಸಿದ್ದವು. ಈ ಪ್ರಯತ್ನದಲ್ಲಿ ಅಭಿನಂದನ್‌ ಪೈಲಟ್‌ ಆಗಿದ್ದ ವಿಮಾನ ಪತನವಾಗಿತ್ತು. ಅವರು ಪ್ಯಾರಾಚೂಟ್‌ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು. ಅವರನ್ನು ಪಾಕಿಸ್ತಾನದಸೇನೆ ವಶಕ್ಕೆ ಪಡೆದಿತ್ತು. ಭಾರತ ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿದೆ.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.