ADVERTISEMENT

ನಿಧಾನಗತಿಯ ಓವರ್‌ರೇಟ್‌: ರಾಹುಲ್– ಗಾಯಕವಾಡ್‌ಗೆ ತಲಾ ₹12 ಲಕ್ಷ ದಂಡ

ಪಿಟಿಐ
Published 20 ಏಪ್ರಿಲ್ 2024, 4:59 IST
Last Updated 20 ಏಪ್ರಿಲ್ 2024, 4:59 IST
<div class="paragraphs"><p>ಕೆ.ಎಲ್.ರಾಹುಲ್‌ ಮತ್ತು&nbsp;ಋತುರಾಜ್ ಗಾಯಕವಾಡ್</p></div>

ಕೆ.ಎಲ್.ರಾಹುಲ್‌ ಮತ್ತು ಋತುರಾಜ್ ಗಾಯಕವಾಡ್

   

ಲಖನೌ: ನಿಗದಿಯ ಅವಧಿಯಲ್ಲಿ ಓವರ್‌ಗಳನ್ನು ಸಂಪೂರ್ಣಗೊಳಿಸಿದ ಕಾರಣಕ್ಕೆ(ಸ್ಲೋ ಓವರ್‌ರೇಟ್‌) ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಋತುರಾಜ್ ಗಾಯಕವಾಡ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಂಡದ ನಾಯಕ ಕೆ.ಎಲ್.ರಾಹುಲ್‌ ಅವರಿಗೆ ಬಿಸಿಸಿಐ ಭಾರಿ ಮೊತ್ತದ ದಂಡ ವಿಧಿಸಿದೆ.

ಲಖನೌದ ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡದ ಎದುರು ಲಖನೌ ತಂಡ 8 ವಿಕೆಟ್‌ಗಳ ಜಯ ಗಳಿಸಿತ್ತು. ಪಂದ್ಯದ ವೇಳೆ ನಿಯಮ ಉಲ್ಲಂಘನೆ ಮಾಡಿದ ಕಾರಣ ಎರಡು ತಂಡದ ನಾಯಕರಿಗೆ ತಲಾ ₹12 ಲಕ್ಷ ದಂಡ ವಿಧಿಸಲಾಗಿದೆ.

ADVERTISEMENT

‘ನಿಧಾನಗತಿಯ ಓವರ್‌ರೇಟ್‌ಗಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್‌.ರಾಹುಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಋತುರಾಜ್ ಗಾಯಕವಾಡ್‌ ಅವರಿಗೆ ತಲಾ ₹12 ಲಕ್ಷ ದಂಡ ವಿಧಿಸಲಾಗಿದೆ. ಲಖನೌ ಮತ್ತು ಚೆನ್ನೈ ತಂಡ ಇದೇ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿವೆ. ಆದ್ದರಿಂದ ತಂಡದ ನಾಯಕರಿಗೆ ದಂಡ ವಿಧಿಸಲಾಗಿದೆ’ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.