ADVERTISEMENT

ದೇಶೀಯ ಟಿ–20 ಪಂದ್ಯಾವಳಿಗಳಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದುಪಡಿಸಿದ ಬಿಸಿಸಿಐ

ಪಿಟಿಐ
Published 14 ಅಕ್ಟೋಬರ್ 2024, 16:52 IST
Last Updated 14 ಅಕ್ಟೋಬರ್ 2024, 16:52 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಐಪಿಎಲ್‌ ಪಂದ್ಯಾವಳಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದುವರಿಸಿರುವ ಬಿಸಿಸಿಐ, ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ–20 ಟ್ರೋಫಿ ಸೇರಿದಂತೆ ದೇಶೀಯ ಟಿ–20 ಪಂದ್ಯಾವಳಿಗಳಲ್ಲಿ ಈ ನಿಯಮವನ್ನು ರದ್ದುಮಾಡಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಗಿತ್ತು. ಬಳಿಕ, ಐಪಿಎಲ್‌ಗೆ ಅದನ್ನು ವಿಸ್ತರಿಸಲಾಗಿತ್ತು.

ಈ ಕುರಿತಂತೆ ಬಿಸಿಸಿಐ ಎಲ್ಲ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಐಪಿಎಲ್‌ನಲ್ಲಿ 2027ರವರೆಗೆ ಈ ನಿಯಮ ಮುಂದುವರಿಕೆಗೆ ನಿರ್ಧರಿಸಿದ ಬೆನ್ನಲ್ಲೇ ದೇಶೀಯ ಕ್ರಿಕೆಟ್‌ನಿಂದ ಹೊರಗಿಡಲಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿ ಹಲವು ಕ್ರಿಕೆಟಿಗರು ಈ ನಿಯಮವನ್ನು ಪ್ರಶ್ನಿಸಿದ್ದರು.

ಐಪಿಎಲ್‌ನ ಹಲವು ಫ್ರಾಂಚೈಸಿಗಳು ಈ ನಿಯಮದ ಪರವಾಗಿದ್ದಾರೆ.

ಈ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ತಡೆಯಾಗಿದೆ. ಕ್ರಿಕೆಟ್ ಅನ್ನು 11 ಆಟಗಾರರು ಆಡುತ್ತಾರೆಯೇ ಹೊರತು 12 ಆಟಗಾರರಲ್ಲ. ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಭಿಮಾನಿಯಲ್ಲ. ಆಟವನ್ನು ಮತ್ತಷ್ಟು ಮನರಂಜನೀಯಗೊಳಿಸಲು ಏನೆಲ್ಲ ಬದಲಾವಣೆ ಮಾಡುತ್ತಿದ್ದೀರಿ ಎಂದು ರೋಹಿತ್ ಶರ್ಮಾ ಅವರು ಕ್ಲಬ್ ಪ್ರೈರೀ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದರು.

ಸೌರಾಷ್ಟ್ರ ಮುಖ್ಯ ಕೋಚ್ ನೀರಜ್ ಅವರು ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.