ADVERTISEMENT

ಅಂಧರ ಕ್ರಿಕೆಟ್‌: ‘ಕ್ಲೀನ್‌ ಸ್ವೀಪ್‌’ ಸಾಧಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 15:39 IST
Last Updated 27 ಅಕ್ಟೋಬರ್ 2018, 15:39 IST
ಸರಣಿ ಗೆದ್ದ ಖುಷಿಯಲ್ಲಿ ಭಾರತ ಅಂಧರ ಕ್ರಿಕೆಟ್‌ ತಂಡದ ಆಟಗಾರರು
ಸರಣಿ ಗೆದ್ದ ಖುಷಿಯಲ್ಲಿ ಭಾರತ ಅಂಧರ ಕ್ರಿಕೆಟ್‌ ತಂಡದ ಆಟಗಾರರು   

ಬೆಂಗಳೂರು: ದೀಪಕ್‌ ಮಲಿಕ್‌ (ಔಟಾಗದೆ 164 ರನ್‌) ಮತ್ತು ಅನಿಲ್‌ ಘರಿಯಾ (120 ರನ್‌) ಅವರ ಅಮೋಘ ಶತಕಗಳ ಬಲದಿಂದ ಭಾರತ ಅಂಧರ ಕ್ರಿಕೆಟ್‌ ತಂಡ ಕೋಲ್ಕತ್ತದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 40 ಓವರ್‌ಗಳಲ್ಲಿ 4 ವಿಕೆಟ್‌ಗೆ 369 (ಚಂದನ ದೇಶಪ್ರಿಯ ಔಟಾಗದೆ 190, ಸುರಂಗ 84; ಅಜಯ್‌ಕುಮಾರ್‌ ರೆಡ್ಡಿ 58ಕ್ಕೆ2).

ಭಾರತ: 34.4 ಓವರ್‌ಗಳಲ್ಲಿ 2 ವಿಕೆಟ್‌ಗೆ 370 (ದೀಪಕ್‌ ಮಲಿಕ್‌ ಔಟಾಗದೆ 164, ಅನಿಲ್‌ ಘರಿಯಾ 120; ಪಥುಮ್‌ 70ಕ್ಕೆ2).

ADVERTISEMENT

ಫಲಿತಾಂಶ: ಭಾರತಕ್ಕೆ 8 ವಿಕೆಟ್‌ ಗೆಲುವು. 3–0ರಿಂದ ಸರಣಿ ಕೈವಶ.

ಪಂದ್ಯಶ್ರೇಷ್ಠ: ಚಂದನ ದೇಶಪ್ರಿಯ.

ಸರಣಿ ಶ್ರೇಷ್ಠ: ಸಮನ್‌ ಕುಮಾರ (ಬಿ–1), ಅಜಯ್‌ ಕುಮಾರ್‌ ರೆಡ್ಡಿ (ಬಿ–2), ಚಂದನ ದೇಶಪ್ರಿಯ (ಬಿ–3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.