ನವದೆಹಲಿ: ಕರ್ನಾಟಕದ ಸುನಿಲ್ ರಮೇಶ್ ಮತ್ತು ದೀಪಕ್ ಮಲಿಕ್ ಗಳಿಸಿದ ಶತಕಗಳ ಬಲದಿಂದ ಭಾರತ ಅಂಧರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಫರೀದಾಬಾದ್‌ನ ಸ್ಲೆಡ್ಜ್ ಹ್ಯಾಮರ್ ಕ್ರಿಕೆಟ್ ಅಕಾಡೆಮಿ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 274 ರನ್‌ಗಳಿಂದ ನೇಪಾಳ ತಂಡಕ್ಕೆ ಸೋಲುಣಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 2 ವಿಕೆಟ್‌ಗೆ 382 ರನ್ ಗಳಿಸಿತು. ನೇಪಾಳ 9 ವಿಕೆಟ್ ಕಳೆದುಕೊಂಡು 108 ರನ್ ಮಾತ್ರ ಗಳಿಸಿತು.
ಸುನಿಲ್ 106 ರನ್ ಮತ್ತು ದೀಪಕ್ ಔಟಾಗದೆ 113 ರನ್ ಗಳಿಸಿ ಗೆಲುವಿಗೆ ಕಾರಣರಾದರು.
ಇನ್ನುಳಿದ ಪಂದ್ಯಗಳಲ್ಲಿ ಬಾಂಗ್ಲಾದೇಶ 99 ರನ್‌ಗಳಿಂದ ದಕ್ಷಿಣ ಆಫ್ರಿಕಾ ಎದುರು, ಶ್ರೀಲಂಕಾ 7 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಗೆದ್ದಿತು.
ಪಾಕಿಸ್ತಾನ ತಂಡಕ್ಕೆ ವೀಸಾ: ಟೂರ್ನಿ ಯಲ್ಲಿ ಭಾಗವಹಿಸಬೇಕಿದ್ದ ಪಾಕಿಸ್ತಾನ ತಂಡಕ್ಕೆ ಭಾರತದ ವೀಸಾ ಲಭಿಸಿದೆ.
ಭಾರತ ವಿದೇಶಾಂಗ ಸಚಿವಾ ಲಯದಿಂದ ಅನುಮತಿ ಸಿಕ್ಕಿದೆ.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 2ಕ್ಕೆ 382 (ಸುನಿಲ್ ರಮೆಶ್ 106, ದೀಪಕ್ ಮಲಿಕ್ ಔಟಾಗದೆ 113, ವೆಂಕಟೇಶ್ವರ ರಾವ್ ಔಟಾಗದೆ 67). ನೇಪಾಳ: 20 ಓವರ್‌ಗಳಲ್ಲಿ 9ಕ್ಕೆ 108 (ಖೇಮಾನಂದ ಘಾಟ್ರೆ 38; ಸುನಿಲ್ ರಮೇಶ್ 7ಕ್ಕೆ 1, ದೀಪಕ್ ಮಲಿಕ್ 27ಕ್ಕೆ 1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.