ಬೆಂಗಳೂರು: ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಹಿನ್ನಡೆಗೊಳಗಾಗಿದೆ.
ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್ ಗಾಯಗೊಂಡಿದ್ದು, ಪರ್ತ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.
ಅಭ್ಯಾಸ ಪಂದ್ಯದ ವೇಳೆ ಗಿಲ್ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ. ತೀವ್ರ ನೋವು ಅನುಭವಿಸಿದ ಗಿಲ್ ತಕ್ಷಣ ಮೈದಾನ ತೊರೆದರು ಎಂದು ಮೂಲಗಳು ತಿಳಿಸಿವೆ.
ಪರ್ತ್ ಟೆಸ್ಟ್ ಪಂದ್ಯ ನವೆಂಬರ್ 22ಕ್ಕೆ ಆರಂಭವಾಗದಲಿದೆ. ಗಾಯಗೊಂಡಿರುವ ಗಿಲ್ ಇನ್ನೊಂದು ವಾರದೊಳಗೆ ಗುಣಮುಖರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ನಾಯಕ ರೋಹಿತ್ ಶರ್ಮಾ ಸಹ ಮೊದಲ ಟೆಸ್ಟ್ ಆಡುವುದು ಅನುಮಾನವೆನಿಸಿದೆ. ಇದರಿಂದಾಗಿ ಸರಣಿ ಆರಂಭಕ್ಕೂ ಮೊದಲೇ ಭಾರತ ತಂಡ ಆತಂಕಕ್ಕೊಳಗಾಗಿದೆ.
ಭಾರತ ತಂಡದ ಬ್ಯಾಟರ್ ಕೆ.ಎಲ್. ರಾಹುಲ್ ಅವರು ಶುಕ್ರವಾರ ಇಲ್ಲಿ ಅಭ್ಯಾಸ ಪಂದ್ಯ ಆಡುವಾಗ ಚೆಂಡು ಬಡಿದು ಗಾಯಗೊಂಡಿದ್ದರು. ಚೆಂಡು ಬಲ ಮೊಣಕೈಗೆ ಬಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.