ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ನೂತನ ಫ್ರಾಂಚೈಸಿ ಖರೀದಿಸಲು ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್ 2022ರಲ್ಲಿ ಎರಡು ನೂತನ ಫ್ರಾಂಚೈಸಿಗಳು ಸೇರ್ಪಡೆಯಾಗಲಿದೆ. ಇದರೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ.
ಯಾವ ನಗರವನ್ನು ಕೇಂದ್ರಿಕರಿಸಿ ಯಾವ ಕಂಪನಿಯು ನೂತನ ಫ್ರಾಂಚೈಸಿಗಳನ್ನು ಖರೀದಿಸಲಿದೆ ಎಂಬುದು ಕುತೂಹಲವೆನಿಸಿದೆ.
'ಔಟ್‌ಲುಕ್ ಇಂಡಿಯಾ' ವರದಿ ಪ್ರಕಾರ ಬಿಸಿಸಿಐ ಸ್ವದೇಶಿ ಖರೀದಿದಾರರತ್ತ ಒಲವು ತೋರಿದ್ದು, ದೀಪಿಕಾ-ರಣವೀರ್ ಜೋಡಿಯು ಫ್ರಾಂಚೈಸಿ ಖರೀದಿಸಲು ಉತ್ಸುಕರಾಗಿದ್ದಾರೆ.
ಹೊಸ ಫ್ರಾಂಚೈಸಿಗಳ ರೇಸ್‌ನಲ್ಲಿ ಗುಜರಾತ್ ಹಾಗೂ ಅಹಮದಾಬಾದ್ ನಗರಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಫ್ರಾಂಚೈಸಿಯನ್ನು ಖರೀದಿಸಲು ಬಹುರಾಷ್ಟ್ರೀಯ ಕಂಪನಿ ಅದಾನಿ ಗ್ರೂಪ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಒಡೆಯರಾಗಿರುವ ಗ್ಲೇಜರ್ ಫ್ಯಾಮಿಲಿ ಆಸಕ್ತಿ ತೋರಿದೆ.
ಇದರ ಜೊತೆಗೆ ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್ ಸೇರಿದಂತೆ ಟೊರೆಂಟ್, ಸಿಂಗಾಪುರ ಮೂಲದ ಪಿಇ ಸಂಸ್ಥೆ, ನವೀನ್ ಜಿಂದಾಲ್ - ಜಿಂದಾಲ್ ಪವರ್ & ಸ್ಟೀಲ್ ಕಂಪನಿಗಳು ರೇಸ್‌ನಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.