ADVERTISEMENT

ಹರಾಜಿಗಿದೆ ಬ್ರಾಡ್‌ಮನ್ ಕ್ಯಾಪ್

ರಾಯಿಟರ್ಸ್
Published 8 ಡಿಸೆಂಬರ್ 2020, 1:51 IST
Last Updated 8 ಡಿಸೆಂಬರ್ 2020, 1:51 IST
ಡೊನಾಲ್ಡ್ ಬ್ರಾಡ್‌ಮನ್‌ –ಟ್ವಿಟರ್ ಚಿತ್ರ
ಡೊನಾಲ್ಡ್ ಬ್ರಾಡ್‌ಮನ್‌ –ಟ್ವಿಟರ್ ಚಿತ್ರ   

ಬೆಂಗಳೂರು: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೊನಾಲ್ಡ್ ಬ್ರಾಡ್‌ಮನ್ ಪದಾರ್ಪಣೆ ಟೆಸ್ಟ್‌ನಲ್ಲಿ ಧರಿಸಿದ್ದ ಕ್ಯಾಪ್‌ ಈ ವಾರ ಹರಾಜು ಮಾಡಲು ನಿರ್ಧರಿಸಲಾಗಿದೆ. 1928ರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಅವರು ಮೊದಲ ಬಾರಿ ಕಣಕ್ಕೆ ಇಳಿದಿದ್ದರು. ನಂತರ ಆಸ್ಟ್ರೇಲಿಯಾದ ನಾಯಕರಾದ ಅವರು 99.94ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದರು. ಈ ದಾಖಲೆಯನ್ನು ಮುರಿಯಲು ಇನ್ನೂ ಸಾಧ್ಯವಾಗಲಿಲ್ಲ.

1959ರಲ್ಲಿ ಬ್ರಾಡ್‌ಮನ್ ತಮ್ಮ ಕ್ಯಾಪ್‌ ನೆರೆಮನೆಯ ಪೀಟರ್ ಡೊನ್ಹಾಮ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. 2003ರಿಂದ ದಕ್ಷಿಣ ಆಸ್ಟ್ರೇಲಿಯಾದ ರಾಷ್ಟ್ರೀಯ ಲೈಬ್ರರಿಯಲ್ಲಿ ಅದನ್ನು ಇರಿಸಲಾಗಿದೆ. ಬ್ರಾಡ್‌ಮನ್ ಅವರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿರುವ ಬ್ಯಾರಿ ಗಿಬ್ಸ್‌ ಅವರು ಕ್ಯಾಪ್‌ ಅನ್ನು ಲೈಬ್ರರಿಗೆ ನೀಡಿದ್ದರು. ಆರ್ಥಿಕ ಅಪರಾಧದಲ್ಲಿ ತೊಡಗಿದ್ದ ಡುನ್ಹಾಮ್‌ ಅವರಿಗೆ ಮೇ ತಿಂಗಳಲ್ಲಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರಿಂದ ವಂಚನೆಗೆ ಒಳಗಾಗಿರುವ ಕೆಲವರು ಕ್ಯಾಪ್ ಹರಾಜು ಹಾಕಿ ಹಣ ಪಾವತಿ ಮಾಡುವಂತೆ ಕೋರಿದ್ದರು.

ಕಾಡ್ಗಿಚ್ಚಿನಿಂದ ತೊಂದರೆಗೆ ಸಿಲುಕಿರುವವರ ನೆರವಿಗಾಗಿ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಈ ವರ್ಷದ ಆರಂಭದಲ್ಲಿ ತಮ್ಮ ಕ್ಯಾಪ್ ಹರಾಜು ಹಾಕಿದ್ದರು. ಬ್ರಾಡ್‌ಮನ್ ಕೊನೆಯದಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಧರಿಸಿದ್ದ ಕ್ಯಾಪ್ 2003ರಲ್ಲಿ ಹರಾಜು ಹಾಕಲಾಗಿತ್ತು. ನಾಯಕನಾಗಿ ಪಾಲ್ಗೊಂಡ ಮೊದಲ ಸರಣಿಯಲ್ಲಿ ಧರಿಸಿದ್ದ ಬ್ಲೇಜರ್ 2015ರಲ್ಲಿ ಹರಾಜು ಹಾಕಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.