ನವದೆಹಲಿ: ಸ್ಫೋಟಕ ಬ್ಯಾಟಿಂಗ್ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ಮಿಂಚಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಲಮ್ ಮತ್ತೆ ಕೆಕೆಆರ್‌ಗೆ ಮರಳುತ್ತಿದ್ದಾರೆ!
ಹೌದು, ಕೆಕೆಆರ್ ಮತ್ತು ಮೆಕ್ಲಂ ನಡುವೆ ಒಪ್ಪಂದವಾಗಿದೆ. ಆದರೆ ಈ ಬಾರಿ ಅವರು ಆಟಗಾರನಾಗಿ ಅಲ್ಲ, ಸಹಾಯಕ ಕೋಚ್ ಆಗಿ ತಂಡವನ್ನು ಸೇರಲಿದ್ದಾರೆ.
2016ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದ ಮೆಕ್ಲಮ್ ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ವಿಶೇಷವೆಂದರೆ, ಎರಡೂ ಕಡೆಯಲ್ಲಿ ಅವರು ಆಸ್ಟ್ರೇಲಿಯಾದ ಸೈಮನ್ ಕ್ಯಾಟಿಚ್ ಬದಲಿಗೆ ಸೇರುತ್ತಿದ್ದಾರೆ.
101 ಟೆಸ್ಟ್ ಪಂದ್ಯಗಳನ್ನು ಆಡಿರುವ ಮೆಕ್ಲಮ್ 6453 ರನ್ ಕಲೆ ಹಾಕಿದ್ದಾರೆ. ಗರಿಷ್ಠ 302 ರನ್ ಗಳಿಸಿದ್ದಾರೆ. 260 ಏಕದಿನ ಪಂದ್ಯಗಳಲ್ಲಿ 6083 ರನ್ ಗಳಿಸಿದ್ದಾರೆ.
ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಕೆಕೆಆರ್ ಪರ ಆಡಿದ್ದ ಮೆಕ್ಲಮ್ ಮೊದಲ ಪಂದ್ಯದಲ್ಲಿ ಸ್ಫೋಟಕ 158 ರನ್ ಗಳಿಸಿ ಅಜೇಯರಾಗಿದ್ದರು. ಐದು ಆವೃತ್ತಿಗಳಲ್ಲಿ ಕೆಕೆಆರ್ ಪರ ಆಡಿದ್ದ ಅವರು 2009ರಲ್ಲಿ ತಂಡದ ನಾಯಕತ್ವವನ್ನೂ ನಿಭಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.