ADVERTISEMENT

ಟಿಮ್ ಪೇನ್‌ಗೆ ಸಿಎ ಗೇಟ್‌ಪಾಸ್ ಕೊಡಬೇಕಿತ್ತು: ರಿಚರ್ಡ್ ಫ್ರುಡೆನ್‌ಸ್ಟೇನ್

ಪಿಟಿಐ
Published 20 ನವೆಂಬರ್ 2021, 15:05 IST
Last Updated 20 ನವೆಂಬರ್ 2021, 15:05 IST
ಟಿಮ್ ಪೇನ್ –ರಾಯಿಟರ್ಸ್ ಚಿತ್ರ
ಟಿಮ್ ಪೇನ್ –ರಾಯಿಟರ್ಸ್ ಚಿತ್ರ   

ಸಿಡ್ನಿ: ಲೈಂಗಿಕ ಮನಸ್ಥಿತಿಯಿಂದ ಸಂದೇಶಗಳನ್ನು ಕಳುಹಿಸಿದ ಟಿಮ್ ಪೇನ್ ಅವರನ್ನು ಮೂರು ವರ್ಷಗಳ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾವೇ ನಾಯಕತ್ವದಿಂದ ಹೊರಹಾಕಬೇಕಾಗಿತ್ತು ಎಂದು ಅಧ್ಯಕ್ಷ ರಿಚರ್ಡ್ ಫ್ರುಡೆನ್‌ಸ್ಟೇನ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

ತಂಡದ ನೆರವು ಸಿಬ್ಬಂದಿಗೆ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಪೇನ್ ಅವರು ಟೆಸ್ಟ್ ನಾಯಕತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದರು. ಈ ಕುರಿತು ಶನಿವಾರ ಮಾತನಾಡಿದ ಫ್ರುಡೆನ್‌ಸ್ಟೇನ್ ’ತನಿಖೆ ಆರಂಭವಾದ ಸಂದರ್ಭದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದುದು ಕ್ರಿಕೆಟ್ ಆಸ್ಟ್ರೇಲಿಯಾ ಮಾಡಿರುವ ದೊಡ್ಡ ಲೋಪ‘ ಎಂದಿದ್ದಾರೆ.

ಸ್ಟೀವ್ ಸ್ಮಿತ್‌ಗೆ ಅವಕಾಶ?

ADVERTISEMENT

ಬ್ಯಾಟಿಂಗ್ ದಿಗ್ಗಜ ಸ್ಟೀವ್ ಸ್ಮಿತ್ ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಪೇನ್ ರಾಜೀನಾಮೆ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಶನಿವಾರ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಸಂಪರ್ಕಿಸಿದ್ದು ಸ್ಮಿತ್ ಅವರ ಹೆಸರನ್ನು ಸೂಚಿಸಿದ್ದಾರೆ.

2018ರಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಟೀವ್ ಸ್ಮಿತ್ ಅವರ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿತ್ತು. ಆದ್ದರಿಂದ ಅವರು ಆಗ ನಾಯಕ ಸ್ಥಾನ ತೊರೆಯಬೇಕಾಗಿ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.