ADVERTISEMENT

ಭಾರತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ನೆರವು

ಪಿಟಿಐ
Published 4 ಮೇ 2021, 5:28 IST
Last Updated 4 ಮೇ 2021, 5:28 IST
   

ಮೆಲ್ಬರ್ನ್: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೈಜೋಡಿಸಲು ಮುಂದಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ 50 ಸಾವಿರಆಸ್ಟ್ರೇಲಿಯನ್ ಡಾಲರ್ ನೆರವು ನೀಡಲಿದೆ. ಆಟಗಾರರ ಸಂಸ್ಥೆ ಮತ್ತು ಯುನಿಸೆಫ್ ಜೊತೆಗೂಡಿ ನಿಧಿ ಸಂಗ್ರಹ ಮಾಡುವುದಕ್ಕೂ ಮುಂದಾಗಿದೆ.

‘ಆಸ್ಟ್ರೇಲಿಯಾವು ಹೆಚ್ಚು ಸ್ನೇಹ ಬೆಳೆಸಿಕೊಂಡಿರುವ ಭಾರತದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಸಿರುವ ಆತಂಕದ ಸ್ಥಿತಿ ಬೇಸರ ತಂದಿದೆ. ಈ ಮಹಾಮಾರಿಯ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕಾರ್ಯದಲ್ಲಿ ಕೈಜೋಡಿಸಲು ಮುಂದಾಗಿದ್ದೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಈ ನಡುವೆ ಪಿಎಂ ಕೇರ್ಸ್‌ ನಿಧಿಗೆ ಹಣ ನೀಡಲು ನಿರ್ಧರಿಸಿದ್ದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಈ ಮೊತ್ತವನ್ನು ಕ್ರಿಕೆಟ್ ಆಸ್ಟ್ರೇಲಿಯಾವು ಯುನಿಸೆಫ್‌ ಜೊತೆಗೂಡಿ ಸಂಗ್ರಹಿಸುವ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.