ADVERTISEMENT

ಎಂ.ಎಸ್‌. ಧೋನಿ ಜೊತೆಗಿನ ವೈಮನಸ್ಸು ವದಂತಿ ತಳ್ಳಿಹಾಕಿದ ಗಂಭೀರ್: ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2022, 8:36 IST
Last Updated 19 ಮಾರ್ಚ್ 2022, 8:36 IST
ಗೌತಮ್ ಗಂಭೀರ್‌ ಮತ್ತು ಎಂ.ಎಸ್. ಧೋನಿ
ಗೌತಮ್ ಗಂಭೀರ್‌ ಮತ್ತು ಎಂ.ಎಸ್. ಧೋನಿ   

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್‌ ಅವರು ಎಂ.ಎಸ್. ಧೋನಿ ಜತೆಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಯುಟ್ಯೂಬ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಂಭೀರ್, ‘ಅನುಭವಿ ವಿಕೆಟ್ ಕೀಪರ್ ಧೋನಿಯವರ ಬಗ್ಗೆ ನನಗೆ ಅಪಾರ ಗೌರವವಿದೆ. ಧೋನಿಗೆ ಯಾವಾಗಲಾದರೂ ಅಗತ್ಯ ಬಿದ್ದರೆ ನಾನು ಅವರ ಪಕ್ಕದಲ್ಲಿ ನಿಲ್ಲುವ ಮೊದಲ ವ್ಯಕ್ತಿ’ ಎಂದು ಹೇಳಿಕೊಂಡಿದ್ದಾರೆ.

ಧೋನಿ ಕುರಿತಾದ ಕೆಲವು ಕಾಮೆಂಟ್‌ಗಳಿಂದಾಗಿ ಗಂಭೀರ್ ಹಲವು ಬಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, ಇದೀಗ ಅವರು, ಧೋನಿ ಜೊತೆಗಿನ ವೈಮನಸ್ಸು ವದಂತಿಗಳನ್ನು ತಳ್ಳಿ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ADVERTISEMENT

‘ನನಗೆ ಧೋನಿಯವರ ಬಗ್ಗೆ ಅಪಾರ ಗೌರವವಿದೆ. ಅದು ಯಾವಾಗಲೂ ಉಳಿಯುತ್ತದೆ. ನಾನು ಈ ವಿಚಾರವನ್ನು ದೇಶದ 138 ಕೋಟಿ ಜನರ ಮುಂದೆ ಎಲ್ಲಿ ಬೇಕಾದರೂ ಹೇಳಬಲ್ಲೆ. ಅವರಿಗೆ ನನ್ನ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಜೀವನದಲ್ಲಿ ಎಂದಾದರೂ ಅಗತ್ಯವಿದ್ದಲ್ಲಿ ನಾನು ಅವರ ಪಕ್ಕದಲ್ಲಿ ಮೊದಲಿಗನಾಗಿ ನಿಲ್ಲುತ್ತೇನೆ’ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

‘ಧೋನಿ ತಂಡದ ನಾಯಕರಾಗಿದ್ದಾಗ ನಾನು ಉಪನಾಯಕನಾಗಿದ್ದೆ. ನಾವು ತಮ್ಮತಮ್ಮತಂಡಗಳಪರವಾಗಿಆಡುವಾಗ ಮೈದಾನದಲ್ಲಿ ಪ್ರತಿಸ್ಪರ್ಧಿಗಳಾಗಿದ್ದೇವೆ. ಆದರೆ, ನಾನು ಅವರ ಬಗ್ಗೆ ತುಂಬಾ ಅಪಾರ ಗೌರವ ಹೊಂದಿರುವ ವ್ಯಕ್ತಿ’ ಎಂದು ತಿಳಿಸಿದ್ದಾರೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.