ADVERTISEMENT

ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಸೆಮಿಗೆ ಕಾರ್ಯದರ್ಶಿ ಇಲೆವನ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 4:52 IST
Last Updated 18 ಸೆಪ್ಟೆಂಬರ್ 2024, 4:52 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌ ತಂಡವು ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮುಂಬೈ ವಿರುದ್ಧ ಮಂಗಳವಾರ ಡ್ರಾ ಸಾಧಿಸಿ, ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಲೆವನ್‌ ತಂಡ 91 ರನ್‌ಗಳ ಮುನ್ನಡೆ ಪಡೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ 42 ಓವರ್‌ಗಳಲ್ಲಿ 8 ವಿಕೆಟ್‌ಗೆ 290 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ADVERTISEMENT

ಗೆಲುವಿಗೆ 200 ರನ್‌ಗಳ ಗುರಿ ಪಡೆದ ಇಲೆವನ್‌ ತಂಡವು 35.3 ಓವರ್‌ಗಳಲ್ಲಿ 1 ವಿಕೆಟ್‌ಗೆ 100 ರನ್‌ ಗಳಿಸಿ ಡ್ರಾ ಸಾಧಿಸಿ, ಮೂರು ಅಂಕ ಪಡೆದು ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.

ಸಂಕ್ಷಿಪ್ತ ಸ್ಕೋರ್‌:

ಚಿನ್ನಸ್ವಾಮಿ ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಮುಂಬೈ 440; ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌: 531; ಎರಡನೇ ಇನಿಂಗ್ಸ್‌: ಮುಂಬೈ: 42 ಓವರುಗಳಲ್ಲಿ 8 ವಿಕೆಟ್‌ಗೆ 290 ಡಿಕ್ಲೇರ್‌ (ಜಯ್‌ ಬಿಸ್ತಾ 50, ಸೂರ‍್ಯಾಂಶ್‌ ಶೆಡ್ಗೆ 71, ಅಥರ್ವ ಅಂಕೋಲೇಕರ್ 31, ಶಶಾಂಕ್ ಅತ್ತರ್ಡೆ ಔಟಾಗದೇ 47; ಅಭಿಲಾಷ್ ಶೆಟ್ಟಿ 65ಕ್ಕೆ3); ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌: 35.3 ಓವರುಗಳಲ್ಲಿ 1 ವಿಕೆಟ್‌ಗೆ 100 (ವಿಶಾಲ್ ಓನತ್ ಔಟಾಗದೇ 51). ಫಲಿತಾಂಶ: ಪಂದ್ಯ ಡ್ರಾ. ಕಾರ್ಯದರ್ಶಿ ಇಲೆವನ್‌ಗೆ 3 ಅಂಕ. ಮುಂಬೈ 1 ಅಂಕ.

ಅಲೂರು (1): ಮೊದಲ ಇನಿಂಗ್ಸ್: ಮಧ್ಯಪ್ರದೇಶ: 360; ಛತ್ತೀಸಗಢ: 164; ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 52.4 ಓವರುಗಳಲ್ಲಿ 169; ಛತ್ತೀಸಗಢ: 65.3 ಓವರುಗಳಲ್ಲಿ 136 (ಅಜಯ್ ಮಂಡಲ್ 41; ಕುಲವಂತ್ ಖೆಜ್ರೊಲಿಯಾ 13ಕ್ಕೆ2, ಕುಮಾರ ಕಾರ್ತಿಕೇಯ 41ಕ್ಕೆ3, ಸಾಗರ ಸೋಳಂಕಿ 41ಕ್ಕೆ3). ಫಲಿತಾಂಶ: ಮಧ್ಯಪ್ರದೇಶಕ್ಕೆ 229 ರನ್ ಜಯ. 6 ಅಂಕ.

ಮೊದಲ ಇನಿಂಗ್ಸ್‌: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 53.3 ಓವರ್‌ಗಳಲ್ಲಿ 262; ಒಡಿಶಾ ಕ್ರಿಕೆಟ್‌ ಸಂಸ್ಥೆ: 86.1 ಓವರ್‌ಗಳಲ್ಲಿ 283; ಎರಡನೇ ಇನಿಂಗ್ಸ್: ಪಾಟೀಲ ಅಕಾಡೆಮಿ: 87.2 ಓವರ್‌ಗಳಲ್ಲಿ 308; ಒಡಿಶಾ ಕ್ರಿಕೆಟ್ ಸಂಸ್ಥೆ: 88.1 ಓವರ್‌ಗಳಲ್ಲಿ 287 (ಕಾರ್ತಿಕ್‌ ಬಿಸ್ವಾಲ್‌ 90. ಕರ್ಶ್‌ ಕೊಠಾರಿ 82ಕ್ಕೆ 4, ಉಮರ್ ಖಾನ್‌ 86ಕ್ಕೆ 4) ಫಲಿತಾಂಶ : ಪಂದ್ಯ ಟೈ, ಇತ್ತಂಡಗಳಿಗೆ ತಲಾ ಮೂರು ಅಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.