ಆಡಿದ ತಮ್ಮ ನೂರನೇ ಟೆಸ್ಟ್‌ನಲ್ಲಿ ಶತಕ ಬಾರಿಸಿ ಆ ಸಂದರ್ಭವನ್ನು ಅವಿಸ್ಮರಣೀಯಗೊಳಿಸಿದ ಆಟಗಾರರಲ್ಲಿ ಜೋ ರೂಟ್ (ಭಾರತ ವಿರುದ್ಧ ಚೆನ್ನೈ ಟೆಸ್ಟ್‌ನಲ್ಲಿ ಮೊದಲ ದಿನದಾಟದ ಕೊನೆಗೆ ಅಜೇಯ 128) ಒಂಬತ್ತನೆಯವರು. ಅವರು ಈ ಹಿರಿಮೆಗೆ ಪಾತ್ರರಾದ ಇಂಗ್ಲೆಂಡ್‌ನ ಮೂರನೇ ಆಟಗಾರ. ಕಾಲಿನ್ ಕೌಡ್ರಿ ಮತ್ತು ಅಲೆಕ್ ಸ್ಟುವರ್ಟ್ ಮೊದಲ ಇಬ್ಬರು.
ರಿಕಿ ಪಾಂಟಿಂಗ್, ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2006ರಲ್ಲಿ ನಡೆದ ಟೆಸ್ಟ್ ಪಂದ್ಯ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದು ವಿಶೇಷ. ತಂಡದ ನಾಯಕನಾಗಿದ್ದ ಅವರು ಮೊದಲ ಇನಿಂಗ್ಸ್‌ನಲ್ಲಿ 120 ರನ್ ಬಾರಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ 143 ರನ್ ಗಳಿಸಿ ಅಜೇಯರಾಗಿ ಉಳಿದು ತಂಡ ಎಂಟು ವಿಕೆಟ್‌ಗಳಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರೂಟ್ ಅವರಿಗಿಂತ ಮೊದಲು ಆ ಅವಿಸ್ಮರಣೀಯ ‘ರೂಟ್’ನಲ್ಲಿ ಸಾಗಿದ್ದ ಉಳಿದ ಎಂಟು ಆಟಗಾರರ ಪಟ್ಟಿ ಇಂತಿದೆ:
1. ಇಂಗ್ಲೆಂಡ್‌ನ ಕಾಲಿನ್ ಕೌಡ್ರಿ (1968, ಬರ್ಮಿಂಗ್‌ಹ್ಯಾಮ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 104), 2. ಪಾಕಿಸ್ತಾನದ ಜಾವೆದ್ ಮಿಯಾಂದಾದ್ (1989, ಲಾಹೋರ್‌ನಲ್ಲಿ ಭಾರತ ವಿರುದ್ಧ 145), 3. ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಜ್ (1990, ಸೇಂಟ್ ಜಾನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 149), ಇಂಗ್ಲೆಂಡ್‌ನ ಅಲೆಕ್ ಸ್ಟುವರ್ಟ್ (2000, ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 105), 5. ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ (2005, ಬೆಂಗಳೂರಿನಲ್ಲಿ ಭಾರತ ವಿರುದ್ಧ 184), 6. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (2006, ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕ್ರಮವಾಗಿ 120 ಮತ್ತು 143*), 7. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (2012, ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 131), 8.ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲಾ (2017, ಶ್ರೀಲಂಕಾ ವಿರುದ್ಧ ಜೊಹಾನೆಸ್‌ಬರ್ಗ್‌ನಲ್ಲಿ 134).
* ಕಾಲಿನ್ ಕೌಡ್ರಿ, ಇಂಜಮಾಮ್– ಉಲ್– ಹಕ್, ಪಾಂಟಿಂಗ್ ಮತ್ತು ಗ್ರೇಮ್ ಸ್ಮಿತ್ ಅವರು ನೂರನೇ ಟೆಸ್ಟ್ ಪಂದ್ಯ ಆಡುವಾಗ ತಂಡದ ನಾಯಕರಾಗಿದ್ದರು. ಈಗ ಆ ಸಾಲಿಗೆ ಜೋ ರೂಟ್ ಕೂಡ ಸೇರಿದ್ದಾರೆ.
* ಪಾಂಟಿಂಗ್ ಅವರೂ ಎರಡೂ ಇನಿಂಗ್ಸ್‌ಗಳಲ್ಲಿಶತಕ ಬಾರಿಸಿದ್ದರೆ ಉಳಿದ ಏಳೂ ಮಂದಿ ಮೊದಲ ಇನಿಂಗ್ಸ್‌ನಲ್ಲೇ ಶತಕ ಬಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.