ಕರಾಚಿ: ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ವಿಷಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಬಿಗಿ ನಿಲುವು ಸಡಿಲಿಸಿ ‘ಹೊಂದಾಣಿಕೆ‘ ಮಾಡಿಕೊಳ್ಳಲು ಮುಂದಾಗಿದೆ. ಟೂರ್ನಿಯನ್ನು ‘ಹೈಬ್ರಿಡ್ ಮಾದರಿ’ಯಲ್ಲಿ ಆಯೋಜಿಸಲು ಮುಂದಾಗಲಿದೆ ಎನ್ನಲಾಗುತ್ತಿದೆ.
ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತನ್ನ ತಂಡ ಕಳುಹಿಸಲು ಭಾರತ ಸರ್ಕಾರವು ನಿರಾಸಕ್ತಿ ತೋರಿಸಿತ್ತು. ಭಾರತ ಮತ್ತು ಪಾಕ್ ದೇಶಗಳ ನಡುವಣ ರಾಜತಾಂತ್ರಿಕ ಭಿನ್ನಾಭಿಪ್ರಾಯವಿದೆ. ಅದರಿಂದಾಗಿ ಭಾರತ ತಂಡವು ಪಾಕ್ ಗೆ ಹೋಗದಿರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಭಾರತ ತಂಡವು ಆಡುವ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಆಯೋಜಿಸುವ ಕುರಿತು ಪಾಕ್ ಸಮ್ಮತಿಸುವ ಸಾಧ್ಯತೆ ದಟ್ಟವಾಗಿದೆ.
2023ರ ಏಷ್ಯಾ ಕಪ್ ಆಯೋಜನೆಯ ಸಂದರ್ಭದಲ್ಲಿಯೂ ಇಂತಹದೇ ಬಿಕ್ಕಟ್ಟು ಎದುರಾಗಿತ್ತು. ಆಗ ಪಿಸಿಬಿಯು ಹೈಬ್ರಿಡ್ ಮಾದರಿಗೆ ಒಪ್ಪಿತ್ತು. ಭಾರತ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.