ಮೈಸೂರು: ಮನೋಜ್ ಎಸ್. ಭಾಂಡಗೆ ಅವರು ಮಿಂಚಿನ ಬೌಲಿಂಗ್ ಮೂಲಕ ಹಿಮಾಚಲ ಪ್ರದೇಶ ತಂಡ ಭಾರಿ ಮುನ್ನಡೆ ಗಳಿಸುವುದನ್ನು ತಡೆದರು.
ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಸೋಮವಾರ 214 ರನ್‌ಗಳಿಗೆ ಆಲೌಟಾಯಿತು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 166 ರನ್ ಗಳಿಸಿತ್ತು. ಆರ್.ಐ.ಠಾಕೂರ್ (77 ರನ್, 4x5, 6x3) ಬ್ಯಾಟಿಂಗ್ ಬಲದಿಂದ ದೊಡ್ಡ ಮೊತ್ತ ಕಲೆ ಹಾಕುತ್ತಿದ್ದ ಎದುರಾಳಿ ತಂಡಕ್ಕೆ ಮನೋಜ್ (47ಕ್ಕೆ 4) ಆಘಾತ ನೀಡಿದರು. ಅವರಿಗೆ ಸಾಥ್ ನೀಡಿದ ರೋಹಿತ್ ಕುಮಾರ್ 37 ರನ್‌ಗಳಿಗೆ ಎರಡು ವಿಕೆಟ್ ಪಡೆದರು.
ಏಳನೇ ಕ್ರಮಾಂಕದಲ್ಲಿ ಆಡಲು ಬಂದ ಎ.ಎಸ್.ಜಾಮ್ವಾಲ್ (57 ರನ್, 4x2, 6x3) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
2ನೇ ಇನ್ನಿಂಗ್ಸ್ ಆರಂಭಿಸಿದ ಕೆಎಸ್‌ಸಿಎ ತಂಡ ಲೋಚನ್, ಪರೀಕ್ಷಿತ್ ವಿಕೆಟ್ ಕಳೆದುಕೊಂಡಿತು. ಆಗ ನಾಯಕ ಕಿಶನ್ ಎಸ್. ಬಿದರೆ (ಬ್ಯಾಟಿಂಗ್ 34) ಹಾಗೂ ಭಾಂಡಗೆ (ಬ್ಯಾಟಿಂಗ್ 14) ಆಸರೆಯಾದರು. ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದ ರಾಜ್ಯ 48 ರನ್‌ಗಳ ಮುನ್ನಡೆ ಪಡೆದಿದೆ.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಕರ್ನಾಟಕ 166. ಹಿಮಾಚಲ ಪ್ರದೇಶ 67.4 ಓವರ್‌ಗಳಲ್ಲಿ 214 (ಆರ್.ಐ.ಠಾಕೂರ್ 77, ಎ.ಎಸ್.ಜಾಮ್ವಾಲ್ 57, ಎಂ.ಎಸ್.ಭಾಂಡಗೆ 47ಕ್ಕೆ 4). ಎರಡನೇ ಇನಿಂಗ್ಸ್: ಕರ್ನಾ ಟಕ 25 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 96 (ಕಿಶನ್ ಎಸ್.ಬಿದರೆ ಬ್ಯಾಟಿಂಗ್ 34, ಮನೋಜ್ ಭಾಂಡಗೆ ಬ್ಯಾಟಿಂಗ್ 14, ಮುಕುಲ್ ನೇಗಿ 27ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.