ಅಮ್ತಾರ್, ಹಿಮಾಚಲಪ್ರದೇಶ: ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ (55; 72ಎ, 4X9) ಅರ್ಧಶತಕ ಮತ್ತು ಮೊಹಸೀನ್ ಖಾನ್ ಆಲ್‌ರೌಂಡ್ ಆಟದಿಂದ ಲದಿಂದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಎದುರು ಜಯಿಸಿತು.
ಇಲ್ಲಿ ನಡೆದ ಪಂದ್ಯದಲ್ಲಿ ಮಂಗಳವಾರ 172 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು 2 ವಿಕೆಟ್‌ಗಳಿಂದ ಜಯಿಸಿತು. ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಹಿಮಾಚಲ ತಂಡವನ್ನು 163 ರನ್‌ಗಳಿಗೆ ಕಟ್ಟಿಹಾಕಿತು. ಮೊನೀಶ್ ರೆಡ್ಡಿ ಮತ್ತು ಮೊಹಸಿನ್ ಖಾನ್ ತಲಾ ನಾಲ್ಕು ವಿಕೆಟ್ ಗಳಿಸಿದರು.
ಆದರೆ ಗುರಿ ಬೆನ್ನಟ್ಟಿದ ಕರ್ನಾಟಕದ ಹಾದಿ ಸುಗಮವಾಗಿರಲಿಲ್ಲ. ಆತಿಥೇಯ ತಂಡದ ಬವಲರ್ ದಿವೇಶ್ ಶರ್ಮಾ (54ಕ್ಕೆ5) ದಾಳಿಯ ಮುಂದೆ ತಂಡವು ಕುಸಿಯುವ ಹಾದಿಯಲ್ಲಿತ್ತು. ಆದರೆ ಪ್ರಖರ್ ಮತ್ತು ಅನೀಶ್ವರ್ ಉತ್ತಮವಾಗಿ ಆಡಿ ಅಪಾಯ ತಪ್ಪಿಸಿದರು. 9ನೇ ಬ್ಯಾಟರ್ ಮೊಹಸಿನ್ ಖಾನ್ ಜೇಯ 15 ಹಾಗೂ ರಾಜವೀರ್ ವಾದ್ವಾ 13 ರನ್ ಗಳಿಸಿ ತಂಡದ ಗೆಲುವಿಗೆ ಬಲ ತುಂಬಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಹಿಮಾಚಲಪ್ರದೇಶ: 62.5 ಓವರ್‌ಗಳಲ್ಲಿ 169 (ಕುಶಾಲ್ ಪಾಲ್ 29, ಆರ್ಯವ್ರತ್ ಶರ್ಮಾ 20, ಮೃದುಲ್ ಸುರೊಚ್ 54, ಮನ್ವಂತ್ ಕುಮಾರ್ 35ಕ್ಕೆ2, ಮೊಹಸಿನ್ ಖಾನ್ 47ಕ್ಕೆ7) ಕರ್ನಾಟಕ: 48.4 ಓವರ್‌ಗಳಲ್ಲಿ 160 (ಮೆಕ್‌ನೀಲ್ ಹ್ಯಾಡ್ಮಿ ನರೋನಾ 22, ಸ್ಮರಣ್ ಆರ್ 23, ಅಕ್ಷಣ್ ರಾವ್ 30, ರಾಜವೀರ್ ವಾಧ್ವಾ 22, ರೋಹಿತ್ ಠಾಕೂರ್ 54ಕ್ಕೆ2, ಸೌರವ್ ಹಿಮಾಲ್ವಿ 34ಕ್ಕೆ3)
ಎರಡನೇ ಇನಿಂಗ್ಸ್:ಹಿಮಾಚಲಪ್ರದೇಶ: 51.3 ಓವರ್‌ಗಳಲ್ಲಿ 163 (ಕುಶಾಲ್ ಪಾಲ್ 42, ಆರ್ಯವ್ರತ್ ಶರ್ಮಾ 31, ಮೃದುಲ್ ಸರೊಚ್ 32, ಮೊನಿಷ್ ರೆಡ್ಡಿ 61ಕ್ಕೆ4, ರಾಜವೀರ್ ವಾದ್ವಾ 34ಕ್ಕೆ2, ಮೊಹಸೀನ್ ಖಾನ್ 24ಕ್ಕೆ4) ಕರ್ನಾಟಕ: 35.3 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 174 (ಪ್ರಖರ್ ಚತುರ್ವೇದಿ 55, ಅಕ್ಷನ್ ರಾವ್ 26, ಅನೀಶ್ವರ್ ಗೌತಮ್ 26, ಮೊಹಸೀನ್ ಖಾನ್ ಅಜೇಯ 15, ರೋಹಿತ್ ಠಾಕೂರ್ 44ಕ್ಕೆ2, ದಿವೇಶ್ ಶರ್ಮಾ 54ಕ್ಕೆ5) ಕರ್ನಾಟಕ ತಂಡಕ್ಕೆ 2 ವಿಕೆಟ್‌ಗಳ ಜಯ.
(ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.