ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
   

ಶಿವಮೊಗ್ಗ: ಕಿಶನ್‌ ಎಸ್‌.ಬೆಡಾರೆ (53) ಮತ್ತು ಎಸ್‌.ಎಸ್‌.ಸಟೇರಿ (ಬ್ಯಾಟಿಂಗ್ 53) ಅವರ ಅರ್ಧ ಶತಕಗಳ ನೆರವಿನಿಂದಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಲೀಗ್‌ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಎರಡನೇ ದಿನ ಮೇಲುಗೈ ಸಾಧಿಸಿತು.

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಹೈದರಾಬಾದ್‌ನ 202 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ಗುರುವಾರ 5 ವಿಕೆಟ್‌ಗೆ 230 ರನ್‌ಗಳೊಡನೆ ದಿನದಾಟ ಪೂರೈಸಿದೆ.

ಒಂದು ಹಂತದಲ್ಲಿ 101 ರನ್‌ಗಳಾಗುಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ ಇವರಿಬ್ಬರ ನಡುವಣ 94 ರನ್‌ಗಳ ಐದನೇ ವಿಕೆಟ್‌ ಜೊತೆಯಾಟದಿಂದ ಚೇತರಿಸಿಕೊಂಡಿತು. ಸಟೇರಿ ಜೊತೆ ಎಗಡೈ ಆಟಗಾರ ಮನೋಜ್‌ ಭಾಂಡಗೆ (ಬ್ಯಾಟಿಂಗ್‌ 23) ಶುಕ್ರವಾರ ಆಟ ಮುಂದುವರಿಸುವರು. ಪ್ರವಾಸಿ ತಂಡ ಕಡೆ ಮಧ್ಯಮ ವೇಗಿ ಅಜಯ್‌ ದೇವ್‌ ಗೌಡ ಮೂರು ವಿಕೆಟ್‌ ಪಡೆದು ಯಶಸ್ವಿ ಎನಿಸಿದರು.

ADVERTISEMENT

ಸ್ಕೋರುಗಳು: ಹೈದರಾಬಾದ್‌: 1ನೇ ಇನಿಂಗ್ಸ್‌: 202; ಕರ್ನಾಟಕ: 1ನೇ ಇನಿಂಗ್ಸ್‌: 96 ಓವರುಗಳಲ್ಲಿ 5 ವಿಕೆಟ್‌ಗೆ 230 (ಅಂಕಿತ್‌ ಉಡುಪ 28, ಬಿ.ಯು.ಶಿವಕುಮಾರ್‌ 42, ಕಿಶನ್‌ ಎಸ್‌.ಬೆಡಾರೆ 53, ಎಸ್‌.ಎಸ್‌.ಸಟೇರಿ ಬ್ಯಾಟಿಂಗ್ 53, ಮನೋಜ್‌ ಎಸ್‌.ಭಾಂಡಗೆ ಬ್ಯಾಟಿಂಗ್‌ 23; ಅಜಯ್‌ ದೇವ್‌ ಗೌಡ 32ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.