ಬೆಂಗಳೂರು: ಆದಿತ್ಯ ಸೋಮಣ್ಣ (36ಕ್ಕೆ6) ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ತಂಡ ಸಿ.ಕೆ.ನಾಯ್ಡು ಟ್ರೋಫಿ ಎಲಿಟ್ ‘ಎ’ ಗುಂಪಿನ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದೆ.
ಬೆಂಗಳೂರಿನ ಹೊರ ವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್ ಮಾಡಿದ ಅಸ್ಸಾಂ ತಂಡ 80.2 ಓವರ್‌ಗಳಲ್ಲಿ 247ರನ್‌ಗಳಿಗೆ ಆಲೌಟ್ ಆಯಿತು.
ಪ್ರಥಮ ಇನಿಂಗ್ಸ್ ಶುರುಮಾಡಿರುವ ಎಸ್.ಜೆ.ನಿಕಿನ್ ಜೋಸ್ ಪಡೆ ದಿನದಾಟದ ಅಂತ್ಯಕ್ಕೆ ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಏಳು ರನ್ ಗಳಿಸಿದೆ.
ಬ್ಯಾಟಿಂಗ್ ಆರಂಭಿಸಿದ ಅಸ್ಸಾಂ ತಂಡ ಎಂ.ಬಿ.ದರ್ಶನ್ ಹಾಕಿದ ಆರನೇ ಓವರ್‌ನಲ್ಲಿ ಬಿಪ್ಲಬ್ ಸೈಕಿಯಾ (10) ವಿಕೆಟ್ ಕಳೆದುಕೊಂಡಿತು. ನಂತರ ಆದಿತ್ಯ, ಮೋಡಿ ಮಾಡಿದರು. ಪ್ರಸೇನ್‌ಜೀತ್ ಸರ್ಕಾರ್, ಅಭಿಷೇಕ್ ಠಾಕೂರಿ, ರಜತ್ ಖಾನ್, ರೋಷನ್ ಆಲಮ್, ರಾಜ್ ಅಗರವಾಲ್ ಮತ್ತು ಅಭಿನವ್ ಚೌಧರಿ ಅವರ ವಿಕೆಟ್ ಉರುಳಿಸಿದ ಆದಿತ್ಯ, ಆತಿಥೇಯರಿಗೆ ಮೇಲುಗೈ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್: ಅಸ್ಸಾಂ: ಮೊದಲ ಇನಿಂಗ್ಸ್: 80.2 ಓವರ್‌ಗಳಲ್ಲಿ 247 (ಅಭಿಷೇಕ್ ಠಾಕೂರಿ 42, ರಾಜಕುದ್ದೀನ್ ಅಹ್ಮದ್ 36, ಮುಜೀಬುರ್ ಅಲಿ 83, ರಾಜ್ ಅಗರವಾಲ್ 30; ವೈಶಾಖ್ ವಿಜಯಕುಮಾರ್ 49ಕ್ಕೆ1, ಎಂ.ಬಿ.ದರ್ಶನ್ 24ಕ್ಕೆ2, ಆದಿತ್ಯ ಸೋಮಣ್ಣ 36ಕ್ಕೆ6, ಕುಶಾಲ್ ಪ್ರಮೇಶ್ 60ಕ್ಕೆ1).
ಕರ್ನಾಟಕ: ಪ್ರಥಮ ಇನಿಂಗ್ಸ್: 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 7 (ನಿಕಿನ್ ಜೋಸ್ ಬ್ಯಾಟಿಂಗ್ 6).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.