ನವದೆಹಲಿ: ‘ನಿಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ ವಿಷಯವನ್ನು ಕೂಡಲೇ ಬಿಸಿಸಿಐ ಗಮನಕ್ಕೆ ತರಬೇಕಿತ್ತು. ಆ ರೀತಿ ಯಾಕೆ ಮಾಡಲಿಲ್ಲ’ ಎಂದು ಕ್ರಿಕೆಟಿಗ ಶ್ರೀಶಾಂತ್ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಬುಧವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಕ್ರಿಕೆಟಿಗನನ್ನು ಪ್ರಶ್ನಿಸಲಾಯಿತು.
2013 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಲ್ಲಿ ಶ್ರೀಶಾಂತ್ ಅವರನ್ನು ಬಂಧಿಸಲಾಗಿತ್ತು. ಅವರು ಕ್ರಿಕೆಟ್ ಆಡದಂತೆ ಬಿಸಿಸಿಐ ಆಜೀವ ನಿಷೇಧ ವಿಧಿಸಿತ್ತು.
2015ರಲ್ಲಿ ಶ್ರೀಶಾಂತ್ ಅವರನ್ನು ವಿಭಾಗೀಯ ನ್ಯಾಯಪೀಠದಿಂದ ಖುಲಾಸೆ ಮಾಡಲಾಗಿತ್ತು. ಆದರೆ, ಬಿಸಿಸಿಐ ನಿಷೇಧದ ಕ್ರಮವನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿದ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.