ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡ, ವಡೋದರದ ರಿಲಯನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೂಚ್ ಬಿಹಾರ್ ಟ್ರೋಫಿಗಾಗಿ ನಡೆಯುತ್ತಿರುವ ಬಿಸಿಸಿಐ 19 ವರ್ಷದೊಳಗಿನವರ ಟೂರ್ನಿಯಲ್ಲಿ ಆತಿಥೇಯ ಬರೋಡ ಎದುರು ಇನಿಂಗ್ಸ್ ಮತ್ತು 212 ರನ್‌ಗಳ ಹೀನಾಯ ಸೋಲು ಕಂಡಿತು.
ನಾಲ್ಕನೇ ದಿನವಾದ ಶನಿವಾರ ಕರ್ನಾಟಕ ತಂಡವು (ಶುಕ್ರವಾರ 207/7) 97.1 ಓವರ್‌ಗಳಲ್ಲಿ 265 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಧೀರಜ್ ಗೌಡ (50;163ಎ) ಮತ್ತು ಸಮರ್ಥ್ ಎನ್. (31) ಅವರು ಇನಿಂಗ್ಸ್ ಸೋಲು ತಪ್ಪಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬರೋಡ ತಂಡದ ಕೇಶವ ಎಂ.ವಾರ್ಕೆ ಐದು ವಿಕೆಟ್ ಪಡೆದರೆ, ಹೆಟ್ ಜಿ. ಪಟೇಲ್ ಮತ್ತು ಕವೀರ್ ದೇಸಾಯಿ ತಲಾ ಎರಡು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 127; ಬರೋಡ: 7 ವಿಕೆಟ್‌ಗೆ 604 ಡಿಕ್ಲೇರ್. ಎರಡನೇ ಇನಿಂಗ್ಸ್: ಕರ್ನಾಟಕ: 97.1 ಓವರ್‌ಗಳಲ್ಲಿ 265 (ಧೀರಜ್ ಗೌಡ 50, ಸಮರ್ಥ್ ಎನ್ 31, ಕೇಶವ ಎಂ.ವಾರ್ಕೆ 111ಕ್ಕೆ 5, ಹೆಟ್ ಜಿ. ಪಟೇಲ್ 16ಕ್ಕೆ 2, ಕವೀರ್ ದೇಸಾಯಿ 57ಕ್ಕೆ 2. ಫಲಿತಾಂಶ: ಬರೋಡ ತಂಡಕ್ಕೆ ಇನಿಂಗ್ಸ್ ಮತ್ತು 212 ರನ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.