ADVERTISEMENT

ಮೊಣಕೈಗೆ ಗಾಯ: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯ

ರಾಯಿಟರ್ಸ್
Published 12 ಫೆಬ್ರುವರಿ 2021, 1:46 IST
Last Updated 12 ಫೆಬ್ರುವರಿ 2021, 1:46 IST
ಜೋಫ್ರಾ ಆರ್ಚರ್, ಇಂಗ್ಲೆಂಡ್ ತಂಡದ ವೇಗದ ಬೌಲರ್: ರಾಯಿಟರ್ಸ್ ಚಿತ್ರ
ಜೋಫ್ರಾ ಆರ್ಚರ್, ಇಂಗ್ಲೆಂಡ್ ತಂಡದ ವೇಗದ ಬೌಲರ್: ರಾಯಿಟರ್ಸ್ ಚಿತ್ರ   

ಚೆನ್ನೈ: ಮೊಣಕೈ ಗಾಯಕ್ಕೆ ತುತ್ತಾಗಿರುವ ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಜೋಫ್ರಾ ಆರ್ಚರ್ ಚೆನ್ನೈನಲ್ಲಿ ಶನಿವಾರ ಆರಂಭವಾಗಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಎರಡು ಪ್ರಮುಖ ವಿಕೆಟ್ ಉರುಳಿಸಿದ್ದ 25 ರ ಹರೆಯದ ಜೋ್ಫ್ರಾ ಆರ್ಚರ್, ಬಳಿಕ ಅಸ್ವಸ್ಥತೆಯಿಂದ ಬಳಲಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಒಂಬತ್ತು ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು. ಅವರ ಬಲ ಮೊಣಕೈಗೆ ಗಾಯವಾಗಿದೆ ಎಂದು ಇಸಿಬಿ ಹೇಳಿದೆ.

"ಇದು ಯಾವುದೇ ಹಳೆಯ ಗಾಯಕ್ಕೆ ಸಂಬಂಧಿಸಿದ್ದಲ್ಲ. ಚಿಕಿತ್ಸೆ ಮೂಲಕ ಜೋಫ್ರಾ ಬಹುಬೇಗ ತಂಡಕ್ಕೆ ಮರಳಲು ಸಾಧ್ಯವಾಗುತ್ತದೆ. ಅಹಮದಾಬಾದ್‌ನ ಮೂರನೇ ಟೆಸ್ಟ ಪಂದ್ಯಕ್ಕೆ ಅವರು ಹಿಂದಿರುಗಲಿದ್ದಾರೆ ," ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಜೋಫ್ರಾ ಅವರ ಬದಲಿಗೆ ತಂಡದಲ್ಲಿ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಅಥವಾ ಆಲಿ ಸ್ಟೋನ್ ಅವರಿಗೆ ಸ್ಥಾನ ಸಿಗಬಹುದು.

ಚೆನ್ನೈನಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯವನ್ನು 227 ರನ್ ಅಂತರದಿಂದ ಜಯಿಸಿದ ಇಂಗ್ಲೆಂಡ್ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.