ADVERTISEMENT

ಕ್ರಿಕೆಟ್‌: ಇಂಗ್ಲೆಂಡ್‌ ವನಿತೆಯರಿಗೆ 275 ರನ್‌ಗಳ ಜಯ

ಏಜೆನ್ಸೀಸ್
Published 10 ಸೆಪ್ಟೆಂಬರ್ 2024, 4:15 IST
Last Updated 10 ಸೆಪ್ಟೆಂಬರ್ 2024, 4:15 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಲಂಡನ್‌: ಇಂಗ್ಲೆಂಡ್‌ ಮಹಿಳಾ ತಂಡವು ಸೋಮವಾರ ಐರ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ದಾಖಲೆಯ 275 ರನ್‌ಗಳಿಂದ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಇಂಗ್ಲೆಂಡ್‌ ತಂಡವು 2–0ಯಿಂದ ವಶ ಮಾಡಿಕೊಂಡಿದೆ. ಮೊದಲ ಪಂದ್ಯವನ್ನು ಆಂಗ್ಲ ಪಡೆ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು.

ADVERTISEMENT

ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಅವರ ಅಜೇಯ 150 ರನ್‌ಗಳ ಬಲದಿಂದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 320 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ಆತಿಥೇಯ ಐರ್ಲೆಂಡ್‌ ತಂಡವು 45 ರನ್‌ಗೆ ಕುಸಿಯಿತು. ಇಂಗ್ಲೆಂಡ್ ತಂಡದ ನಾಯಕಿ ಕೇಟ್ ಕ್ರಾಸ್ ಮತ್ತು ಲಾರೆನ್ ಫೈಲರ್ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 8ಕ್ಕೆ 320 (ಟಾಮಿ ಬ್ಯೂಮಾಂಟ್ ಔಟಾಗದೇ 150,  ಫ್ರೇಯಾ ಕೆಂಪ್ 65; ಅರ್ಲೀನ್ ಕೆಲ್ಲಿ 61ಕ್ಕೆ 2, ಫ್ರೇಯಾ ಸಾರ್ಜೆಂಟ್ 60ಕ್ಕೆ 2). ಐರ್ಲೆಂಡ್‌: 16.5 ಓವರ್‌ಗಳಲ್ಲಿ 45 (ಉನಾ ರೇಮಂಡ್-ಹೋಯ್ 22;  ಕೇಟ್ ಕ್ರಾಸ್ 8ಕ್ಕೆ 3, ಲಾರೆನ್ ಫೈಲರ್ 10ಕ್ಕೆ 3). ಪಂದ್ಯದ ಆಟಗಾರ್ತಿ: ಟಾಮಿ ಬ್ಯೂಮಾಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.