ADVERTISEMENT

ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ರಾಡ್‌ ಮಾರ್ಷ್‌ ನಿಧನ

ರಾಯಿಟರ್ಸ್
Published 4 ಮಾರ್ಚ್ 2022, 4:16 IST
Last Updated 4 ಮಾರ್ಚ್ 2022, 4:16 IST
ರಾಡ್‌ ಮಾರ್ಷ್‌
ರಾಡ್‌ ಮಾರ್ಷ್‌   

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಾಡ್ ಮಾರ್ಷ್ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಫೆ. 24ರಂದು ಕಾರ್ಯಕ್ರಮವೊಂದರಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ಸಾಗಿಸುವಾಗ ಅವರು ಕೋಮಾಕ್ಕೆ ಜಾರಿದ್ದರು. ಅಡಿಲೇಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಅವರು ಬದುಕುಳಿದಿಲ್ಲ.

74 ವರ್ಷದ ವಿಕೆಟ್‌ ಕೀಪರ್ ಮಾರ್ಷ್‌, 1970 ಮತ್ತು 1980ರ ಅವಧಿಯಲ್ಲಿ 96 ಟೆಸ್ಟ್‌, 92 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾದ ಅತ್ಯುತ್ತಮ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಅವರು, 355 ಔಟ್‌ಗಳನ್ನು ಮಾಡಿದ್ದಾರೆ. 1984ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿ, ಆ ನಂತರ ದೀರ್ಘಕಾಲ ರಾಷ್ಟ್ರೀಯ ಆಯ್ಕೆಗಾರರಾಗಿದ್ದರು.

ADVERTISEMENT

ಮಾರ್ಷ್‌ ನಿಧನಕ್ಕೆ ಆಸ್ಟ್ರೇಲಿಯಾದ ಕ್ರಿಕೆಟ್‌ ಮಂಡಳಿ, ಆಟಗಾರರು ಮತ್ತು ವಿಶ್ವದ ಕ್ರಿಕೆಟ್‌ ಸಮುದಾಯ ಬೇಸರ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.