ನವದೆಹಲಿ: ವಿರಾಟ್ ಕೊಹ್ಲಿ ಅವರು ತಂಡದ ನಾಯಕನಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಸಿಯ ಸದಸ್ಯರೆಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸಮರ್ಥ ಕೋಚ್ ನೇಮಕ ಮಾಡಲಾಗುವುದು ಎಂದು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯೆ ಶಾಂತಾ ರಂಗಸ್ವಾಮಿ ಹೇಳಿದ್ದಾರೆ.
ಗುರುವಾರ ಈ ವಿಷಯ ಕುರಿತು ಮಾತನಾಡಿದ ಅವರು, ‘ಕೆಲವು ಮಾಧ್ಯಮ ವರದಿಗಳಲ್ಲಿ ಕೊಹ್ಲಿಯವರ ಅಭಿಪ್ರಾಯವನ್ನು ಓದಿದ್ದೇನೆ. ಆ ಕುರಿತು ಅನ್ಷುಮನ್ ಗಾಯಕವಾಡ ಹೇಳಿರುವುದನ್ನು ನೋಡಿದ್ದೇನೆ. ಅನ್ಷುಮನ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಕೋಚ್ ಅಭ್ಯರ್ಥಿಗಳ ಅನುಭವ, ತಂಡವನ್ನು ಒಗ್ಗೂಡಿಸಿ ಇಡುವ ಸಾಮರ್ಥ್ಯ, ಆಟದ ತಂತ್ರಗಾರಿಕೆಗಳನ್ನು ಹೆಣೆಯುವ ಪ್ರತಿಭೆಗಳನ್ನು ಅನುಲಕ್ಷಿಸಿ ಅವಕಾಶ ನೀಡಲಾಗುತ್ತದೆ’ ಎಂದರು.
ಭಾರತ ತಂಡದ ಕೋಚ್ ಹುದ್ದೆಗೆ ರವಿಶಾಸ್ತ್ರಿ ಆಕಾಂಕ್ಷಿಯಾಗಿದ್ಧಾರೆ. ಆಸ್ಟ್ರೇಲಿಯಾದ ಟಾಮ್ ಮೂಡಿ, ಭಾರತದ ಲಾಲಚಂದ್ ರಾಜಪೂತ್ ಮತ್ತು ರಾಬಿನ್ ಸಿಂಗ್ ಅವರೂ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.