ADVERTISEMENT

ಕ್ರಿಕೆಟ್‌ | ಕರ್ನಾಟಕ, ತಮಿಳುನಾಡು ಪಂದ್ಯಕ್ಕೆ ಮಳೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 2:04 IST
Last Updated 14 ಅಕ್ಟೋಬರ್ 2024, 2:04 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಹುಬ್ಬಳ್ಳಿ: ಮಳೆ ಕಾರಣ ಮೈದಾನದ ಹೊರಾಂಗಣ ತೇವಗೊಂಡಿದ್ದರಿಂದ ಭಾನುವಾರ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಮತ್ತು ತಮಿಳುನಾಡು ನಡುವಣ ಪಂದ್ಯದ ಮೊದಲ ದಿನದಾಟ ನಡೆಯಲಿಲ್ಲ. ಟಾಸ್ ಕೂಡ ಹಾಕಲಿಲ್ಲ.

ಹೀಗಾಗಿ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳು ನಿರಾಶೆಯಿಂದ ಹಿಂದಿರುಗಬೇಕಾಯಿತು. 

ADVERTISEMENT

ಅಂಪೈರ್‌ಗಳಾದ ಸಂಜಯ್‌ಕುಮಾರ್ ಸಿಂಗ್, ಸೌರಭ್‌ ಧೋತೆ ಮತ್ತು ರೆಫರಿ ಸಂಜತ್‌ ರಾವುಲ್ ಅವರು ಬೆಳಿಗ್ಗೆ 10.30, ಮಧ್ಯಾಹ್ನ 12.40, 2 ಮತ್ತು 3.30ಕ್ಕೆ ಮೈದಾನವನ್ನು ಪರಿಶೀಲಿಸಿದರು. ಕ್ರೀಡಾಂಗಣದ ಸಿಬ್ಬಂದಿ ಸಹ ತೇವವನ್ನು ಒಣಗಿಸಲು ಶ್ರಮಿಸಿದರು. ಆದರೂ ತೇವ ಕಡಿಮೆಯಾಗದ ಕಾರಣ ದಿನದಾಟವನ್ನು ರದ್ದುಗೊಳಿಸಿದರು.

ಭಾನುವಾರ ರಾತ್ರಿಯೂ ಮಳೆ ಸುರಿದರೆ ಎರಡನೇ ದಿನದಾಟಕ್ಕೂ ಅಡ್ಡಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.