ADVERTISEMENT

ರಸ್ತೆ ಸುರಕ್ಷತಾ ಜಾಗೃತಿಗಾಗಿ ಕ್ರಿಕೆಟ್: ದಶಕದ ಬಳಿಕ ಮರುಕಳಿಸಿದ ವಿರೂ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 2:07 IST
Last Updated 6 ಮಾರ್ಚ್ 2021, 2:07 IST
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್   

ರಾಯಪುರ: ದಶಕದ ಹಿಂದಿನ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ವೈಭವ ಶುಕ್ರವಾರ ಮತ್ತೆ ಮರುಕಳಿಸಿತು!

ಇಲ್ಲಿಯ ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ರಸ್ತೆ ಸುರಕ್ಷತಾ ವಿಶ್ವ ಸೀರಿಸ್ ಟಿ20 ಕ್ರಿಕೆ್ ಟೂರ್ನಿಯಲ್ಲಿ ವೀರೂ ಕೇವಲ 35 ಎಸೆತಗಳಲ್ಲಿ 80 ರನ್‌ ಗಳಿಸಿ ಅಜೇಯರಾಗುಳಿದರು.

ಅವರ ಅಬ್ಬರದ ಬಲದಿಂದ ಇಂಡಿಯಾ ಲೆಜೆಂಡ್ಸ್‌ ತಂಡವು 10 ವಿಕೆಟ್‌ಗಳಿಂದ ಬಾಂಗ್ಲಾದೇಶ ಲೆಜೆಂಡ್ಸ್‌ ವಿರುದ್ಧ ಜಯಿಸಿತು. ವೀರೂ ಐದು ಸಿಕ್ಸರ್ ಮತ್ತು 10 ಬೌಂಡರಿ ಸಿಡಿಸಿದರು. ಸಚಿನ್ ತೆಂಡೂಲ್ಕರ್ 26 ಎಸೆತಗಳಲ್ಲಿ 33 ರನ್‌ ಗಳಿಸಿ ಅಜೇಯರಾಗುಳಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ ಲೆಜೆಂಡ್ಸ್‌: 19.4 ಓವರ್‌ಗಳಲ್ಲಿ 109 (ನಝೀಮುದ್ದೀನ್ 49, ಆರ್. ವಿನಯಕುಮಾರ್ 25ಕ್ಕೆ2, ಪ್ರಗ್ಯಾನ್ ಓಜಾ 12ಕ್ಕೆ2, ಯುವರಾಜ್ ಸಿಂಗ್ 15ಕ್ಕೆ2)

ಇಂಡಿಯಾ ಲೆಜೆಂಡ್ಸ್‌: 10.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 114 (ವೀರೇಂದ್ರ ಸೆಹ್ವಾಗ್ ಔಟಾಗದೆ 80, ಸಚಿನ್ ತೆಂಡೂಲ್ಕರ್ ಔಟಾಗದೆ 33) ಫಲಿತಾಂಶ: ಇಂಡಿಯಾ ಲೆಜೆಂಡ್ಸ್‌ಗೆ 10 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ವೀರೇಂದ್ರ ಸೆಹ್ವಾಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.