ನವದೆಹಲಿ: ಭಾರತದಿಂದ ಜಮೈಕಾಗೆ ಕೋವಿಡ್-19 ಲಸಿಕೆ ಕಳುಹಿಸಿಕೊಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಆ್ಯಂಡ್ರೆ ರಸೆಲ್‌ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ವಿಡಿಯೊದಲ್ಲಿ ಮಾತನಾಡಿರುವ ಅವರು,ʼಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತದ ಹೈಕಮಿಷನ್‌ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಲಸಿಕೆ ಇದೀಗ ಇಲ್ಲಿವೆ. ನಾವು ಉತ್ಸುಕರಾಗಿದ್ದೇವೆ. ಜಗತ್ತುಸಾಮಾನ್ಯ ಸ್ಥಿತಿಗೆ ಮರಳುವುದನ್ನು ಎದುರು ನೋಡುತ್ತಿದ್ದೇನೆ. ನಾವೀಗ ಹಿಂದೆಂದಿಗಿಂತಲೂ ಹೆಚ್ಚು ಹತ್ತಿರದವರಾಗಿದ್ದೇವೆ. ಭಾರತ ಮತ್ತು ಜಮೈಕಾದ ಜನರು ಈಗ ಸಹೋದರಾಗಿದ್ದೇವೆʼ ಎಂದು ಹೇಳಿದ್ದಾರೆ.
ರಸೆಲ್, ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ಪರ ಆಡುತ್ತಾರೆ.
ಇದೇ ತಿಂಗಳ ಆರಂಭದಲ್ಲಿ ಭಾರತವು 50 ಸಾವಿರ ಡೋಸ್‌ನಷ್ಟು ಕೋವಿಡ್-19 ಲಸಿಕೆಯನ್ನು ಜಮೈಕಾಗೆ ಕಳುಹಿಸಿಕೊಟ್ಟಿತ್ತು.ಹೀಗಾಗಿ ಆ ದೇಶದ ಪ್ರಧಾನಿಆ್ಯಂಡ್ರೊ ಹೋನೆಸ್ ಭಾರತಕ್ಕೆ ಧನ್ಯವಾದಗಳನ್ನು ಹೇಳಿದ್ದರು.ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್ ಲಸಿಕೆಯುಮಾರ್ಚ್ 8ರಂದು ಜಮೈಕಾಗೆ ತಲುಪಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.